ADVERTISEMENT

ಭಾರ್ತಿ ಏರ್‌ಟೆಲ್‌ ಲಾಭ ಶೇ 89ರಷ್ಟು ಏರಿಕೆ

ಪಿಟಿಐ
Published 31 ಅಕ್ಟೋಬರ್ 2022, 13:31 IST
Last Updated 31 ಅಕ್ಟೋಬರ್ 2022, 13:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರ್ತಿ ಏರ್‌ಟೆಲ್‌ ಕಂಪನಿಯು ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ₹ 2,145 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ಲಾಭವು ಶೇಕಡ 89ರಷ್ಟು ಏರಿಕೆ ಆಗಿದೆ ಎಂದು ಕಂಪನಿಯು ತಿಳಿಸಿದೆ.

ಪ್ರತಿ ಗ್ರಾಹಕರಿಂದ ಬರುವ ಆದಾಯವು (ಎಆರ್‌ಪಿಯು) ₹ 153 ಇದ್ದಿದ್ದು ₹ 190ಕ್ಕೆ ಏರಿಕೆ ಆಗಿದೆ. ಇದರಿಂದಾಗಿ ಲಾಭವು ಈ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದು ಹೇಳಿದೆ. ಒಟ್ಟು ವರಮಾನ ಶೇ 22ರಷ್ಟು ಹೆಚ್ಚಾಗಿ ₹ 34,527 ಕೋಟಿಗೆ ತಲುಪಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT