ADVERTISEMENT

ಏರ್‌ಟೆಲ್‌ನಿಂದ ವೇಗದ ಇಂಟರ್‌ನೆಟ್‌ ಸೇವೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 13:22 IST
Last Updated 11 ಜುಲೈ 2024, 13:22 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ದೇಶದ 1,200ಕ್ಕೂ ಹೆಚ್ಚು ನಗರಗಳಲ್ಲಿ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ದೂರಸಂಪರ್ಕ ಸೇವಾ ಸಂಸ್ಥೆ ಏರ್‌ಟೆಲ್‌, ವೇಗದ ಇಂಟರ್‌ನೆಟ್‌ ಸೇವೆಯನ್ನು ಆರಂಭಿಸಿದೆ.

ಗ್ರಾಹಕರಿಗೆ ವೇಗದ ವೈಫೈ ಸೇವೆ ಒದಗಿಸಲು ಈ ಕ್ರಮಕೈಗೊಳ್ಳಲಾಗಿದೆ ಎಂದು ಏರ್‌ಟೆಲ್‌ ತಿಳಿಸಿದೆ.

ವೈಫೈ ಪ್ಲಾನ್‌ನಲ್ಲಿ ಟಿ.ವಿ ಕಾರ್ಯಕ್ರಮಗಳು, ಸಿನಿಮಾಗಳು ಮತ್ತು ವೆಬ್‌ ಸರಣಿಗಳ ಆಯ್ಕೆಯನ್ನು ನೀಡಲಾಗುತ್ತಿದೆ. ವೇಗದ ಇಂಟರ್‌ನೆಟ್‌ನಿಂದ ಏರ್‌ಟೆಲ್‌ ವೈಫೈ ಮೂಲಕ ಪ್ರಸಾರವಾಗುವ 22ಕ್ಕೂ ಅಧಿಕ ಒಟಿಟಿಗಳು ಮತ್ತು 350ಕ್ಕೂ ಹೆಚ್ಚು ಟಿ.ವಿ ಚಾನೆಲ್‌ಗಳನ್ನು ವೀಕ್ಷಿಸಬಹುದಾಗಿದೆ ಎಂದು ತಿಳಿಸಿದೆ.

ADVERTISEMENT

‘ಸ್ಮಾರ್ಟ್‌ ಸಾಧನಗಳನ್ನು ಬಳಸಲು, ಓದಲು ಮತ್ತು ಕೆಲಸ ಮಾಡಲು ಅಧಿಕ ವೇಗದ ಇಂಟರ್‌ನೆಟ್‌ನ ಅಗತ್ಯವಿದೆ. ಈ ಮೊದಲು ಏರ್‌ಟೆಲ್‌ ವೈಫೈ ಸೀಮಿತ ಲಭ್ಯತೆ ಇತ್ತು. ಈಗ ಈ ಸಮಸ್ಯೆಯನ್ನು ಬಗೆಹರಿಸಿದ್ದು, ಅಧಿಕ ವೇಗದ ವೈಫೈ ಸೇವೆ ಒದಗಿಸಲಾಗುತ್ತಿದೆ. ಗ್ರಾಹಕರ ಈ ಸೇವೆಯನ್ನು ಬಳಸಿಕೊಳ್ಳಬೇಕು’ ಎಂದು ಕಂಪನಿಯ ಸಿಇಒ ಗೋಪಾಲ್‌ ವಿಠ್ಠಲ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.