ADVERTISEMENT

ಸೆಬಿ: ತ್ಯಾಗಿ ಸೇವಾವಧಿ ವಿಸ್ತರಣೆ

ಪಿಟಿಐ
Published 5 ಆಗಸ್ಟ್ 2020, 21:15 IST
Last Updated 5 ಆಗಸ್ಟ್ 2020, 21:15 IST
ಅಜಯ್ ತ್ಯಾಗಿ
ಅಜಯ್ ತ್ಯಾಗಿ   

ನವದೆಹಲಿ:ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಅಧ್ಯಕ್ಷರಾಗಿ ಅಜಯ್ ತ್ಯಾಗಿ ಅವರು 2022ರ ಫೆಬ್ರುವರಿಯವರೆಗೂ ಮುಂದುವರಿಯಲಿದ್ದಾರೆ. ಅವರ ಸೇವಾವಧಿಯನ್ನು 18 ತಿಂಗಳು ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ತ್ಯಾಗಿ ಅವರ ಸೇವಾವಧಿ ವಿಸ್ತರಣೆ ಆಗುತ್ತಿರುವುದು ಇದು ಎರಡನೆಯ ಸಲ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ, ಸಚಿವ ಸಂಪುಟದ ನೇಮಕಾತಿಗಳ ಸಮಿತಿಯು ತ್ಯಾಗಿ ಅವರ ಸೇವಾವಧಿಯನ್ನು ಸೆಪ್ಟೆಂಬರ್ 1ರಿಂದ ಅನ್ವಯವಾಗುವಂತೆ ವಿಸ್ತರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT