ಮುಂಬೈ: ಷೇರುಪೇಟೆಯ ಪ್ರಮುಖ ಹೂಡಿಕೆದಾರ ರಾಕೇಶ್ ಜುಂಜುನ್‌ವಾಲಾ ಅವರ ಪಾಲುದಾರಿಕೆ ಹೊಂದಿರುವ ಆಕಾಸ ಏರ್‌ಲೈನ್ಸ್, ದೇಶದಲ್ಲಿ ಶೀಘ್ರದಲ್ಲೇ ವಿಮಾನಯಾನ ಸೇವೆ ಒದಗಿಸಲಿದೆ.
ಈ ಬಗ್ಗೆ ಆಕಾಸ ಏರ್‌ಲೈನ್ಸ್ ಸಂಸ್ಥೆ ಸೋಮವಾರ ನೂತನ ವಿಮಾನದ ಚಿತ್ರವನ್ನು ಟ್ವೀಟ್ ಮಾಡಿ, ಶೀಘ್ರದಲ್ಲೇ ನಿಮ್ಮ ಆಕಾಶಕ್ಕೆ ಬರಲಿದ್ದೇವೆ ಎಂದು ಹೇಳಿದೆ.
ದೇಶದಲ್ಲಿ ವಾಣಿಜ್ಯ ಸೇವೆ ನೀಡಲು ಆಕಾಸ ಏರ್‌ಲೈನ್ಸ್, ನಾಗರಿಕ ವಿಮಾನಯಾನ ಸಚಿವಾಲಯದಿಂದ ಅನುಮತಿ ಪಡೆದುಕೊಂಡಿದೆ.
ಕಡಿಮೆ ದರದಲ್ಲಿ ವಿಮಾನಯಾನ ಸೇವೆ ನೀಡುವುದು ಆಕಾಸ ಸಂಸ್ಥೆಯ ಉದ್ದೇಶವಾಗಿದೆ.
2021ರಲ್ಲಿ ಸಂಸ್ಥೆ 72 ಬೋಯಿಂಗ್ 737 ಮ್ಯಾಕ್ಸ್ ಏರ್‌ಕ್ರಾಫ್ಟ್ ಮತ್ತು ಸಿಎಫ್‌ಎಂ ಲೀಪ್–1ಬಿ ಎಂಜಿನ್‌ಗಳಿಗೆ ಬೇಡಿಕೆ ಸಲ್ಲಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.