ಶಾಂಘೈ:ವಿಶ್ವದ ಎರಡು ಬಲಿಷ್ಠ ಆರ್ಥಿಕತೆಗಳಾದ ಅಮೆರಿಕ ಮತ್ತು ಚೀನಾ ನಡೆಯುತ್ತಿರುವ ವಾಣಿಜ್ಯ ಸಮರ ‘ಜಗತ್ತಿನ ಅತ್ಯಂತ ಮೂರ್ಖತನದ ವಿಷಯ’ ಎಂದು ಅಲಿಬಾಬಾದ ಸ್ಥಾಪಕ ಜಾಕ್ ಮ ಹೇಳಿದ್ದಾರೆ.
ಶಾಂಘೈನಲ್ಲಿ ನಡೆಯುತ್ತಿರುವಚೀನಾ ಅಂತರರಾಷ್ಟ್ರೀಯ ಆಮದು ಎಕ್ಸ್‌ಪೊನಲ್ಲಿ ಅವರು ಮಾತನಾಡಿದರು.ಇತ್ಮಧ್ಯೆ, ಚೀನಾಅಧ್ಯಕ್ಷಕ್ಸಿ ಜಿನ್‌ಪಿಂಗ್ ಮುಕ್ತ ವ್ಯಾಪಾರವ್ಯವಸ್ಥೆಒದಗಿಸುವುದಾಗಿ ಸೋಮವಾರ ಶಪತ ಮಾಡುವ ಮೂಲಕಅಮೆರಿಕದ ನಡೆಗೆ ಪ್ರರೋಕ್ಷವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ದೇಶಿಯ ಬಳಕೆಯ ಆಮದು, ಕಡಿಮೆ ಸುಂಕ,ಕಸ್ಟಮ್ಸ್ ಕ್ಲಿಯರೆನ್ಸ್ ಪ್ರಕ್ರಿಯೆಗಳನ್ನು ಸರಾಗಗೊಳಿಸುವುದು ಮತ್ತು ಬೌದ್ಧಿಕ ಆಸ್ತಿ ಹಕ್ಕನ್ನುಉಲ್ಲಂಘಿಸುವವರಿಗೆ ಕಠಿಣ ಶಿಕ್ಷೆ ವಿಧಿಸುವುದು ಸೇರಿ ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಅಲ್ಲದೆ, ಜೀನಾದಲ್ಲಿವಿಶ್ವದ ಶ್ರೇಷ್ಟ ದರ್ಜೆಯ ವ್ಯಾಪಾರ ವಾತಾವರಣ ನಿರ್ಮಿಸುತ್ತೇವೆ’ ಎಂದು ಎಕ್ಸ್‌ಪೋದಲ್ಲಿಜಿನ್‌ಪಿಂಗ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.