ADVERTISEMENT

ವರ್ಕ್ ಫ್ರಂ ಹೋಮ್‌ ಶೀಘ್ರ ಅಂತ್ಯ: ಟಿಸಿಎಸ್‌

ಪಿಟಿಐ
Published 14 ಜುಲೈ 2024, 15:17 IST
Last Updated 14 ಜುಲೈ 2024, 15:17 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ಉದ್ಯೋಗಿಗಳು ಮನೆಯಿಂದ ಕೆಲಸ ನಿರ್ವಹಿಸುವುದು ಕಡಿಮೆಯಾಗಿದೆ. ಕಚೇರಿಯಲ್ಲಿ ಕೆಲಸ ನಿರ್ವಹಿಸುವ ಉದ್ಯೋಗಿಗಳ ಸಂಖ್ಯೆಯು ಕೋವಿಡ್‌ ಸಾಂಕ್ರಾಮಿಕದ ಪೂರ್ವ ಸ್ಥಿತಿಗೆ ತಲುಪಿದೆ ಎಂದು ದೇಶದ ಅತಿದೊಡ್ಡ ಸಾಫ್ಟ್‌ವೇರ್‌ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್‌) ತಿಳಿಸಿದೆ.

‘ಕಂಪನಿಯಲ್ಲಿ 6 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. ಯಾವುದೇ ಅಡೆತಡೆ ಇಲ್ಲದೆ ಕಂಪನಿಯ ಕಾರ್ಯಾಚರಣೆ ನಡೆಯುತ್ತಿದೆ’ ಎಂದು ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಮಿಲಿಂದ್ ಲಕ್ಕಡ್ ತಿಳಿಸಿದ್ದಾರೆ. 

ಕೋವಿಡ್‌ ಸಾಂಕ್ರಾಮಿಕದ ವೇಳೆ ಉದ್ಯೋಗಿಗಳು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದರು. ಸದ್ಯ ವಾರದಲ್ಲಿ ಐದು ದಿನಗಳವರೆಗೆ ಕಚೇರಿಯಿಂದ ಕೆಲಸ ನಿರ್ವಹಿಸುವ ಉದ್ಯೋಗಿಗಳ ಸಂಖ್ಯೆಯು ಶೇ 70ಕ್ಕಿಂತ ಹೆಚ್ಚಿದೆ. 18 ತಿಂಗಳ ಕಠಿಣ ಶ್ರಮದಿಂದಾಗಿ ಇದು ಕಾರ್ಯಸಾಧ್ಯವಾಗಿದೆ. ಶೀಘ್ರವೇ, ಮನೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಮೊಬೈಲ್‌ ನಂಬರ್‌ಗೆ ಎಡತಾಕುವುದು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ADVERTISEMENT

ಪ್ರಸಕ್ತ ವರ್ಷದ ಜೂನ್‌ ಅಂತ್ಯಕ್ಕೆ ಕಂಪನಿಯಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆ ಶೇ 35.5ರಷ್ಟು ಕಡಿಮೆಯಾಗಿದೆ ಎಂದು ಟಿಸಿಎಸ್‌ ವರದಿ ತಿಳಿಸಿದೆ. 

‘ಮಹಿಳಾ ಉದ್ಯೋಗಿಗಳ ಸಂಖ್ಯೆ ಕಡಿಮೆಯಾಗಲು ಹಲವು ಕಾರಣಗಳಿವೆ. ಕೋವಿಡ್‌ ಸಾಂಕ್ರಾಮಿಕಕ್ಕೂ ಮೊದಲು ಕಂಪನಿಯು ಹಲವು ನೀತಿಗಳನ್ನು ಅಳವಡಿಸಿಕೊಂಡಿತ್ತು. ಉದ್ಯೋಗಿಗಳ ಅಗತ್ಯತೆ ಪೂರೈಸಲು ಕಂಪನಿಯು ಬದ್ಧವಾಗಿದೆ ಎಂದು ಲಕ್ಕಡ್‌ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.