ಬೆಂಗಳೂರು (ರಾಯಿಟರ್ಸ್): ಆಲ್ಫಾಬೆಟ್ ಇಂಕ್ ಸಿಇಒ ಸುಂದರ್ ಪಿಚೈ ಅವರು 2022ರಲ್ಲಿ ಒಟ್ಟು ₹1,854 ಕೋಟಿ ವೇತನ ಪಡೆದಿದ್ದಾರೆ ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ. ಕಂಪನಿಯಲ್ಲಿನ ಮಧ್ಯಮ ದರ್ಜೆಯ ಉದ್ಯೋಗಿಯೊಬ್ಬರು ಪಡೆಯುವ ವೇತನಕ್ಕಿಂತ 800 ಪಟ್ಟು ಹೆಚ್ಚಿನ ಮೊತ್ತ ಇದಾಗಿದೆ.
ಒಟ್ಟು ಮೊತ್ತದಲ್ಲಿ ಷೇರು ರೂಪದಲ್ಲಿ ದೊರೆತಿರುವ ಮೊತ್ತವೇ ₹1,788 ಕೋಟಿಯಷ್ಟು ಇದೆ. ಕಂಪನಿಯು ಜಾಗತಿಕ ಮಟ್ಟದಲ್ಲಿ ಉದ್ಯೋಗ ಕಡಿತ ಮಾಡುತ್ತಿರುವ ಸಂದರ್ಭದಲ್ಲಿಯೇ ಪಿಚೈ ಮತ್ತು ಇತರ ಉದ್ಯೋಗಿಗಳಿಗೆ ನೀಡಲಾಗಿರುವ ವೇತನದಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿದೆ. ಜಾಗತಿಕ ಮಟ್ಟದಲ್ಲಿ 12 ಸಾವಿರ ಉದ್ಯೋಗ ಕಡಿತ ಮಾಡುವುದಾಗಿ ಕಂಪನಿಯು ಜನವರಿಯಲ್ಲಿ ಘೋಷಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.