ಬೆಂಗಳೂರು: ಹಬ್ಬದ ಮಾರಾಟಕ್ಕೆ ಅನುಕೂಲ ಆಗುವಂತೆ ಹೊಸದಾಗಿ 90 ಸಾವಿರಕ್ಕೂ ಅಧಿಕ ಉದ್ಯೋಗಾವಕಾಶ ಕಲ್ಪಿಸಿರುವುದಾಗಿ ಅಮೆಜಾನ್ ಡಾಟ್ ಇನ್ ಮಾಹಿತಿ ನೀಡಿದೆ.
ಇದೇ 29ರಿಂದ ಅಕ್ಟೋಬರ್ 4ರವರೆಗೆ ನಡೆಯಲಿರುವ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್‌ಗೆಂದು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ.
ಬೆಂಗಳೂರು, ಮುಂಬೈ, ಹೈದರಾಬಾದ್, ದೆಹಲಿ, ಚೆನ್ನೈ, ಅಹಮದಾಬಾದ್ ಮತ್ತು ಪುಣೆಯನ್ನೂ ಒಳಗೊಂಡು ಹಲವು ನಗರಗಳಲ್ಲಿ ಕೆಲಸ ನೀಡಿರುವುದಾಗಿ ತಿಳಿಸಿದೆ.
ಹಬ್ಬದ ಮಾರಾಟದಲ್ಲಿ ಸೃಷ್ಟಿಯಾಗುವ ಬೇಡಿಕೆಗಳನ್ನು ಸಕಾಲಕ್ಕೆ ಈಡೇರಿಸಲು ಸರಕುಗಳ ಪೂರೈಕೆ, ವಿತರಣೆ, ಗ್ರಾಹಕರ ಸೇವೆ ಹೀಗೆ ಇನ್ನೂ ಹಲವು ಅಗತ್ಯಗಳಿಗಾಗಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದೆ.
ಈ ಹಬ್ಬದ ಸಂದರ್ಭವುಸರಕು ಸಾಗಣೆ, ಪ್ಯಾಕೇಜಿಂಗ್ ವಲಯದಲ್ಲಿಯೂ ಪರೋಕ್ಷವಾಗಿ ಸಾವಿರಾರು ಉದ್ಯೋಗ ಸೃಷ್ಟಿಗೆ ಕಾರಣವಾಗಿದೆ ಎಂದೂ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.