ನವದೆಹಲಿ: 10,000 ನೌಕರರನ್ನು ಕೆಲಸದಿಂದ ತೆಗೆದುಹಾಕುವುದಾಗಿ ಹೇಳಿದ್ದ ಅಮೆಜಾನ್, ಇದೀಗ ನೌಕರರಿಗೆ ಮತ್ತೊಂದು ಆಘಾತ ನೀಡಿದೆ.
ಈಗ ಆರಂಭವಾಗಿರುವ ಉದ್ಯೋಗ ಕಡಿತ ಮುಂದಿನ ವರ್ಷದವರೆಗೂ ಮುಂದುವರಿಯಲಿದೆ ಎಂದು ಕಂಪನಿ ಹೇಳಿದೆ.
10,000 ನೌಕರರನ್ನು ಕೆಲಸದಿಂದ ವಜಾ ಮಾಡುವ ಪ್ರಕ್ರಿಯೆಯನ್ನು ಅಮೆಜಾನ್ ಎರಡು ದಿನಗಳ ಹಿಂದೆಯೇ ಆರಂಭಿಸಿತ್ತು.
ಈ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆಯೇ ಇದೀಗ, ಉದ್ಯೋಗ ಕಡಿತ ಮುಂದಿನ ವರ್ಷದವರೆಗೂ ಮುಂದುವರಿಯಲಿದೆ ಎಂದು ಕಂಪನಿ ಘೋಷಣೆ ಮಾಡಿದೆ. ಇದು ಸಾವಿರಾರು ಉದ್ಯೋಗಿಗಳಿಗೆ ಆತಂಕ ಮೂಡಿಸಿದೆ.
ಈ ಬಗ್ಗೆ ಅಮೆಜಾನ್ ಸಿಇಒ ಆಂಡಿ ಜೆಸ್ಸಿ ನೌಕರರಿಗೆ ಮೇಲ್ ಮಾಡಿದ್ದು, ಉದ್ಯೋಗ ಕಡಿತವನ್ನು ಮುಂದಿನ ವರ್ಷದವೆರೆಗೂ ಮುಂದುವರಿಸುವುದಾಗಿ ಹೇಳಿದ್ದಾರೆ. ಜತೆಗೆ ತಾವಾಗಿಯೆ ಕೆಲಸಕ್ಕೆ ರಾಜೀನಾಮೆ ನೀಡುವ ಆಯ್ಕೆಯನ್ನೂ ನೌಕರರ ಮುಂದಿಟ್ಟಿದ್ದಾರೆ.
‘ನಾನು ಈ ಹುದ್ದೆ ವಹಿಸಿಕೊಂಡು ಒಂದೂವರೆ ವರ್ಷ ಆಗಿದೆ. ಈ ಅವಧಿಯಲ್ಲಿ ನಾನು ತೆಗೆದುಕೊಳ್ಳುತ್ತಿರುವ ಕಠಿಣ ನಿರ್ಧಾರ ಇದು‘ ಎಂದು ಜೆಸ್ಸಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.