ನವದೆಹಲಿ: ಅಮೆಜಾನ್ ಭಾರತದಲ್ಲಿ ವಿವಿಧ ಹಂತಗಳಲ್ಲಿ ಸುಮಾರು 500 ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ವರದಿಗಳು ತಿಳಿಸಿವೆ.
ಈ ವರ್ಷದ ಮಾರ್ಚ್‌ನಲ್ಲಿ ಜಾಗತಿಕ ಮಟ್ಟದ ಉದ್ಯೋಗ ಕಡಿತವನ್ನು ಅಮೆಜಾನ್ ಘೋಷಣೆ ಮಾಡಿತ್ತು. ಅದರ ಪ್ರಕಾರವಾಗಿ ಸದ್ಯ ವಜಾ ಪ್ರಕ್ರಿಯೆ ನಡೆದಿದೆ. ಉದ್ಯೋಗ ಕಡಿತ ಮಾಡುವ ಅಮೆಜಾನ್‌ನ ನಿರ್ಧಾರದಿಂದಾಗಿ ಜಾಗತಿಕವಾಗಿ 9,000 ಸಿಬ್ಬಂದಿ ನೌಕರಿ ಕಳೆದುಕೊಳ್ಳುವ ಆತಂಕವಿದೆ.
ಕೊಚ್ಚಿ ಮತ್ತು ಲಕ್ನೋದಂತಹ ನಗರಗಳಲ್ಲಿ ಅಮೆಜಾನ್‌ನ ಹಲವು ವಿಭಾಗಗಳನ್ನು ಮುಚ್ಚಲಾಗಿದೆ. ಅಮೆಜಾನ್ ಡಿಜಿಟಲ್ ಕೇಂದ್ರಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಸುದ್ದಿ ಮಾಧ್ಯಮ ‘ಮನಿ ಕಂಟ್ರೋಲ್’ ವರದಿ ಮಾಡಿದೆ.
ನಮ್ಮ ವಾರ್ಷಿಕ ವಹಿವಾಟು ನಿರ್ವಹಣೆ ಯೋಜನೆ ಪರಾಮರ್ಶೆ ಭಾಗವಾಗಿ ಪ್ರತಿ ವಹಿವಾಟನ್ನು ವಿಮರ್ಶಿಸುತ್ತೇವೆ ಮತ್ತು ನಮಗೆ ಅಗತ್ಯವೆಸಿದ ಬದಲಾವಣೆ ಮಾಡುತ್ತೇವೆ ಎಂದು ಕಂಪನಿಯ ವಕ್ತಾರರು ಈ ಹಿಂದೆ ಹೇಳಿದ್ದರು.
ಈಗ ಆರಂಭವಾಗಿರುವ ಉದ್ಯೋಗ ಕಡಿತ ಮುಂದಿನ ವರ್ಷದವರೆಗೂ ಮುಂದುವರಿಯಲಿದೆ ಎಂದು ಕಂಪನಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.