ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಜೊತೆಗಿನ, ₹ 24,713 ಕೋಟಿ ಮೌಲ್ಯದ ಒಪ್ಪಂದದ ವಿಚಾರದಲ್ಲಿ ಫ್ಯೂಚರ್ ಸಮೂಹವು ಮುಂದಡಿ ಇರಿಸದಂತೆ ತಡೆಯಬೇಕು ಎಂಬ ಉದ್ದೇಶದಿಂದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ ಎಂದು ಮೂಲಗಳು ತಿಳಿಸಿವೆ.
ಈ ವಿಚಾರವಾಗಿ ಪ್ರತಿಕ್ರಿಯೆ ಕೇಳಿದ್ದ ಇ–ಮೇಲ್‌ಗೆ ಫ್ಯೂಚರ್ ಮತ್ತು ಅಮೆಜಾನ್ ಉತ್ತರಿಸಿಲ್ಲ. ಹಿಂದಿನ ತಿಂಗಳು ದೆಹಲಿ ಹೈಕೋರ್ಟ್ ಮೊರೆಹೋಗಿದ್ದ ಅಮೆಜಾನ್, ಸಿಂಗಪುರ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ (ಎಸ್‌ಐಎಸಿ) ನೀಡಿದ ಮಧ್ಯಂತರ ಆದೇಶ ಜಾರಿಗೆ ಬರುವಂತೆ ನಿರ್ದೇಶನ ನೀಡಬೇಕು ಎಂದು ಕೋರಿತ್ತು. ಫ್ಯೂಚರ್ ಸಮೂಹವು ರಿಲಯನ್ಸ್ ಜೊತೆಗಿನ ಒಪ್ಪಂದದ ವಿಚಾರದಲ್ಲಿ ಮುಂದಡಿ ಇರಿಸುವಂತೆ ಇಲ್ಲ ಎಂದು ಮಧ್ಯಸ್ಥಿಕೆ ಕೇಂದ್ರ ಸೂಚಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.