ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು, ಉದ್ಯಮಿ ಗೌತಮ್ ಅದಾನಿ ಸಮೂಹಕ್ಕೆ ಸೇರಿದ ಮಧ್ಯಪ್ರದೇಶದ ಮಹಾನ್ ಎನರ್ಜಿ ಲಿಮಿಟೆಡ್‌ನಲ್ಲಿ ಶೇ 26ರಷ್ಟು ಷೇರುಗಳನ್ನು ಖರೀದಿಸಿದ್ದಾರೆ.
ಆ ಮೂಲಕ ಉದ್ಯಮ ವಲಯದ ಪ್ರತಿಸ್ಪರ್ಧಿಗಳಾದ ಈ ಇಬ್ಬರು ಇಂಧನ ಕ್ಷೇತ್ರದಲ್ಲಿ ಒಟ್ಟಾಗಿ ಕೆಲಸ ಮಾಡಲಿದ್ದಾರೆ. ಮಹಾನ್ ಎನರ್ಜಿಯು ಅಂಬಾನಿ ಪವರ್ ಲಿಮಿಟೆಡ್‌ನ ಅಂಗಸಂಸ್ಥೆಯಾಗಿದೆ.
₹10 ಮುಖಬೆಲೆಯ ₹50 ಕೋಟಿ ಮೌಲ್ಯದ ಐದು ಕೋಟಿ ಷೇರಗಳನ್ನು ರಿಲಯನ್ಸ್ ಇಂಡಸ್ಟ್ರೀಸ್ ಖರೀದಿಸಿದೆ. 500 ಮೆಗಾವಾಟ್ ವಿದ್ಯುತ್ ಬಳಕೆಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಎರಡೂ ಕಂಪನಿಗಳು ಪ್ರತ್ಯೇಕವಾಗಿ ಷೇರುಪೇಟೆಗೆ ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.