ADVERTISEMENT

ಎರಿಕ್ಸನ್‌ಗೆ ₹460 ಕೋಟಿ ಪಾವತಿಸಿದ ರಿಲಯನ್ಸ್‌: ಅನಿಲ್‌ ಅಂಬಾನಿ ನಿರಾಳ

ಹಣ ಪಾವತಿಗೆ ಸುಪ್ರೀಂ ಕೋರ್ಟ್‌ ನೀಡಿತ್ತು ಗಡುವು

ಏಜೆನ್ಸೀಸ್
Published 18 ಮಾರ್ಚ್ 2019, 13:10 IST
Last Updated 18 ಮಾರ್ಚ್ 2019, 13:10 IST
   

ಮುಂಬೈ: ರಿಲಯನ್ಸ್‌ ಕಮ್ಯುನಿಕೇಷನ್ಸ್ ಲಿಮಿಟೆಡ್‌ ₹462 ಕೋಟಿ(67.42 ಮಿಲಿಯನ್‌ ಡಾಲರ್‌) ಬಾಕಿ ಮೊತ್ತವನ್ನುಸ್ವೀಡನ್‌ನ ದೂರಸಂಪರ್ಕ ಉಪಕರಣ ತಯಾರಿಕಾ ಸಂಸ್ಥೆ ಎರಿಕ್ಸನ್‌ಗೆ ಪಾವತಿಸಿದೆ.

ನಾಲ್ಕು ವಾರಗಳೊಳಗೆ ಎರಿಕ್ಸನ್‌ ಸಂಸ್ಥೆಗೆ ₹450 ಕೋಟಿ ಪಾವತಿಸಬೇಕು ಇಲ್ಲವೇ ಕೋರ್ಟ್‌ ಆದೇಶ ಉಲ್ಲಂಘನೆಗೆ ಮೂರು ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಕಳೆದ ತಿಂಗಳು ಆದೇಶಿಸಿತ್ತು. ರಿಲಯನ್ಸ್‌ ಕಮ್ಯುನಿಕೇಷನ್ಸ್‌ ಮುಖ್ಯಸ್ಥ ಅನಿಲ್‌ ಅಂಬಾನಿ ಹಾಗೂ ಸಂಸ್ಥೆ ಇಬ್ಬರು ನಿರ್ದೇಶಕರಿಗೆ ಕೋರ್ಟ್‌ ಸೂಚನೆ ನೀಡಿತ್ತು.

ರಿಲಯನ್ಸ್‌ ಕಮ್ಯುನಿಕೇಷನ್ಸ್‌ನಿಂದ ₹462 ಕೋಟಿ ಸ್ವೀಕೃತವಾಗಿದೆ ಎಂದು ಎರಿಕ್ಸನ್‌ ಸಂಸ್ಥೆ ವಕ್ತಾರೆ ಸೋಮವಾರ ಹೇಳಿದ್ದಾರೆ. ಕೋರ್ಟ್‌ ನೀಡಿದ್ದ ಗಡುವು ಮುಗಿಯಲು ದಿನ ಮುಂಚಿತವಾಗಿ ಹಣ ಪಾವತಿಯಾಗಿರುವುದು ತಿಳಿದುಬಂದಿದೆ.

ಎರಿಕ್ಸನ್‌ಗೆ ರಿಲಯನ್ಸ್‌ ಕಮ್ಯುನಿಕೇಷನ್ಸ್‌ ₹550 ಕೋಟಿ ಹಾಗೂ ಅದಕ್ಕೆ ಬಡ್ಡಿ ₹21 ಕೋಟಿ ಸೇರಿದಂತೆ ಒಟ್ಟು ₹571 ಕೋಟಿ ಪಾವತಿಸಬೇಕಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.