ADVERTISEMENT

ಷಾಪಿಂಗ್‌, ಗೇಮಿಂಗ್‌ ಆ್ಯಪ್‌ಗೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2018, 19:30 IST
Last Updated 25 ಡಿಸೆಂಬರ್ 2018, 19:30 IST
app
app   

ಇದು ಮೊಬೈಲ್‌ ಆ್ಯಪ್‌ಗಳ ಜಮಾನ. ದಿನಚರಿ ದಾಖಲಿಸಲು, ಷಾಪಿಂಗ್‌, ವಿಡಿಯೊ, ಗೇಮ್‌, ಸೋಷಿಯಲ್‌ ಮೀಡಿಯಾ... ಹೀಗೆ ಮೊಬೈಲ್‌ನಲ್ಲಿರುವ ಬಹುತೇಕ ಅರ್ಧದಷ್ಟು ಜಾಗವನ್ನು ಆ್ಯಪ್‌ಗಳೇ ಆವರಿಸಿಕೊಂಡಿರುತ್ತವೆ.

ಕನಿಷ್ಠ ದಿನಕ್ಕೊಂದು ಹೊಸ ಆ್ಯಪ್‌ ಹುಟ್ಟಿಕೊಳ್ಳುತ್ತಿದೆ ಎಂದರೂ ತಪ್ಪಾಗಲಾರದು. ಬಳಕೆದಾರರ ಆಸಕ್ತಿ, ಹವ್ಯಾಸಗಳ ಬಗ್ಗೆ ಅಧ್ಯಯನ ನಡೆಸಿ ಕಂಪನಿಗಳು ಆ್ಯಪ್‌ಗಳನ್ನು ಅಭಿವೃದ್ಧಿಪಡಿಸುತ್ತಿವೆ.

2019ರಲ್ಲಿಷಾಪಿಂಗ್‌, ವಿಡಿಯೊ ಮತ್ತು ಗೇಮಿಂಗ್‌ ಆ್ಯಪ್‌ಗಳನ್ನು ಬಳಸುವವರ ಸಂಖ್ಯೆಯಲ್ಲಿ ಶೇ 60ರಷ್ಟು ಹೆಚ್ಚಾಗಲಿದೆ ಎನ್ನುತ್ತದೆ ಆ್ಯಪ್‌ಗಳ ವಿತರಣಾ ಸಂಸ್ಥೆ ಮೊಮ್ಯಾಜಿಕ್‌.

ADVERTISEMENT

ಮೊಬೈಲ್ ಡೇಟಾ ದರದಲ್ಲಿನ ಇಳಿಕೆ ಹಾಗೂ ಡೇಟಾ ವೇಗ ಹೆಚ್ಚಾಗುತ್ತಿರುವುದು ಆ್ಯಪ್‌ಗಳ ಬಳಕೆಯಲ್ಲಿ ಗಣನೀಯ ಪ್ರಗತಿಗೆ ಕಾರಣವಾಗಿದೆ ಎನ್ನುತ್ತಿದೆ.

ಪ್ರಮುಖ 10 ಭಾಷೆಗಳಲ್ಲಿ ಭಾರತವು ನ್ಯೂಸ್‌ ಕಂಟೆಂಟ್‌ಗಳನ್ನು ಸೃಷ್ಟಿಸುವ ದೇಶವಾಗಿದೆ. ಎಲ್ಲಾ ವಯೋಮಾನದವರೂ ನ್ಯೂಸ್‌ ರಿಲೇಟೆಡ್‌ ಆ್ಯಪ್‌ಗಳನ್ನು ಬಳಸುತ್ತಿದ್ದಾರೆ. ಹೀಗಾಗಿ ಬೇರೆಲ್ಲಾ ಆ್ಯಪ್‌ಗಳಿಗಿಂತಲೂ ನ್ಯೂಸ್‌ ಆ್ಯಪ್‌ಗಳ ಬಳಕೆ ಉತ್ತಮ ಪ್ರಗತಿ ಸಾಧಿಸಲಿದೆ ಎಂದು ಕಂಪನಿಯ ಸಿಇಒ ಅರುಣ್‌ ಗುಪ್ತಾ ಹೇಳುತ್ತಾರೆ.

ಸಾಮಾಜಿಕ ಮಾಧ್ಯಮಗಳ ಆ್ಯಪ್‌ ಬಳಸುತ್ತಿರುವವರ ಸಮೂಹವು ಜಿಪಿಎಸ್‌ ನ್ಯಾವಿಗೇಷನ್‌, ಪಾರ್ಕಿಂಗ್‌ ಇನ್ಫರ್ಮೇಷನ್‌, ಹೈವೇ ಹೆಲ್ಪರ್‌ ತರಹದ ಹಲವು ಚಾಲನೆಗೆ ಪೂರಕವಾದ ಆ್ಯಪ್‌ಗಳನ್ನು ಬಳಸುತ್ತಿದೆ. ಈ ರೀತಿ ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ತಂಡ ರಚಿಸಿಕೊಂಡಿರುವವರು ಹೊಸ ಸ್ಥಳಗಳ ಅನ್ವೇಷಣೆ ಮತ್ತು ಪ್ರವಾಸಕ್ಕೆ ಹೆಚ್ಚು ಗಮನ ನೀಡುತ್ತಿದ್ದಾರೆ. ಹೀಗಾಗಿ ಹವಾಮಾನ ಮುನ್ಸೂಚನೆ ನೀಡುವ, ಗಾಳಿಯ ಗುಣಮಟ್ಟವನ್ನು ತಿಳಿಸುವ ಆ್ಯಪ್‌ಗಳನ್ನೂ ತಮ್ಮ ಬಳಿ ಇಟ್ಟುಕೊಂಡಿದ್ದಾರೆ.

ಹೊಸದಾಗಿ ಮೊಬೈಲ್‌ ಬಳಸುವವರು ಆಹಾರ, ಪಾನೀಯ, ಆರೋಗ್ಯ, ಫಿಟ್‌ನೆಸ್‌, ವಾಹನ, ವೈದ್ಯಕೀಯ ವಿಷಯಗಳಿಗೆ ಸಂಬಂಧಿಸಿದ ಆ್ಯಪ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಳ್ಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.