ನವದೆಹಲಿ: ಆ್ಯಪಲ್ ಇಂಡಿಯಾದ ವರಮಾನವು 2023ರ ಮಾರ್ಚ್‌ಗೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಶೇ 48ರಷ್ಟು ಹೆಚ್ಚಾಗಿ ₹49,322 ಕೋಟಿಗೆ ತಲುಪಿದೆ ಎಂದು ಬಿಸಿನೆಸ್ ಇಂಟಲಿಜೆನ್ಸ್ ಸಂಸ್ಥೆ ಟೋಫ್ಲರ್ ತಿಳಿಸಿದೆ.
2022ರ ಹಣಕಾಸು ವರ್ಷದಲ್ಲಿ ಕಂಪನಿ ₹33,381 ಕೋಟಿ ವರಮಾನ ಹೊಂದಿತ್ತು. ಕಂಪನಿಯ ಲಾಭವು 2022ರ ಹಣಕಾಸು ವರ್ಷದಲ್ಲಿ ₹1,263 ಕೋಟಿ ಇದ್ದಿದ್ದು 2023ರ ಹಣಕಾಸು ವರ್ಷದಲ್ಲಿ ₹2,230 ಕೋಟಿಗೆ ಏರಿಕೆಯಾಗಿದೆ. ಒಟ್ಟು ವೆಚ್ಚವು ₹31,693 ಕೋಟಿಯಿಂದ ₹46,444 ಕೋಟಿ ಏರಿಕೆ ಆಗಿದೆ ಎಂದು ಟೋಫ್ಲರ್ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.