ನವದೆಹಲಿ: ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದಲ್ಲಿ ಐಪಾಡ್‌ಗಳ ಮಾರಾಟ ಎರಡಂಕಿ ದಾಟಿದೆ ಎಂದು ಐಫೋನ್ ತಯಾರಿಕಾ ಕಂಪನಿ ಆ್ಯಪಲ್ ಶುಕ್ರವಾರ ಹೇಳಿದೆ.
ಒಟ್ಟು ನಿವ್ವಳ ಮಾರಾಟದಲ್ಲಿ ಒಂದು ವರ್ಷದಲ್ಲಿ 6 ಪ್ರತಿಶತದಷ್ಟು ಬೆಳವಣಿಗೆಯಾಗಿದೆ ಎಂದು ಕಂಪನಿ ತಿಳಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಸಿಇಒ ಟಿಮ್ ಕುಕ್, ‘ಅಮೆರಿಕ, ಯುರೋಪ್, ಯುಎಸ್, ಬ್ರೆಜಿಲ್, ಫ್ರಾನ್ಸ್, ಮೆಕ್ಸಿಕೊ, ಯುಕೆ, ಕೊರಿಯಾ, ಮಲೇಷಿಯಾ ಸೇರಿದಂತೆ ಹಲವು ದೇಶಗಳಲ್ಲಿ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಉತ್ತಮ ಆದಾಯ ಗಳಿಸಿದ್ದೇವೆ. ಅದರ ಜತೆಗೆ ಭಾರತ, ಥೈಲ್ಯಾಂಡ್, ಸೌದಿ ಅರೇಬಿಯಾ ಮತ್ತು ಯುಎಇಗಳಲ್ಲಿ ಸಾರ್ವಕಾಲಿಕ ದಾಖಲೆಯ ಆದಾಯ ಗಳಿಸಿದ್ದೇವೆ’ ಎಂದು ವಿವರಿಸಿದ್ದಾರೆ.
ಈಗಾಗಲೇ ಭಾರತದಲ್ಲಿ ಮುಂಬೈ ಮತ್ತು ದೆಹಲಿಯಲ್ಲಿ ಎರಡು ಹೊಸ ಆ್ಯಪಲ್ ಮಳಿಗೆಗಳನ್ನು ತೆರೆಯಲಾಗಿದೆ. ಇನ್ನೂ ನಾಲ್ಕು ಹೊಸ ಮಳಿಗೆಗಳನ್ನು ತೆರೆಯಲು ಉತ್ಸುಕರಾಗಿದ್ದೇವೆ’ ಎಂದು ಕುಕ್ ಹೇಳಿದ್ದಾರೆ.
ಅಕ್ಟೋಬರ್‌ನಲ್ಲಿ ಪುಣೆ, ಬೆಂಗಳೂರು, ದೆಹಲಿ–ಎನ್‌ಸಿಆರ್ ಮತ್ತು ಮುಂಬೈನಲ್ಲಿ ಹೊಸದಾಗಿ ಮಳಿಗೆಗಳನ್ನು ತೆರೆಯುವುದಾಗಿ ಕಂಪನಿ ಘೋಷಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.