ನವದೆಹಲಿ: ಉಕ್ಕು ತಯಾರಿಕಾ ಕ್ಷೇತ್ರದ ಅತಿ ದೊಡ್ಡ ಕಂಪನಿ ಆರ್ಸೆಲರ್ ಮಿತ್ತಲ್, ಜೂನ್ ತ್ರೈಮಾಸಿಕದಲ್ಲಿ ₹ 4,192 ಕೋಟಿ ನಷ್ಟ ಅನುಭವಿಸಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಕಂಪನಿಯ ನಷ್ಟ ₹3,352 ಕೋಟಿ ಇತ್ತು.
ಕಂಪನಿಯು ಜನವರಿ–ಡಿಸೆಂಬರ್ ಅನ್ನು ಹಣಕಾಸು ವರ್ಷವನ್ನಾಗಿ ಪರಿಗಣಿಸುತ್ತದೆ. ಕೋವಿಡ್–19 ಕಾಯಿಲೆಯಿಂದಾಗಿ ವಹಿವಾಟಿನ ಮೇಲೆ ಪರಿಣಾಮ ಉಂಟಾಗಿದೆ. ಒಟ್ಟಾರೆ ರಫ್ತು ಶೇ 23.7ರಷ್ಟು ಇಳಿಕೆಯಾಗಿದೆ ಎಂದು ಹೇಳಿದೆ.
‘2020ರ ಎರಡನೇ ತ್ರೈಮಾಸಿಕವು ಕಂಪನಿಯ ಇತಿಹಾಸದಲ್ಲಿಯೇ ಅತ್ಯಂತ ಕಷ್ಟದ ಅವಧಿಯಾಗಿದೆ. ಕೋವಿಡ್ ನಿಯಂತ್ರಿಸಲು ಲಾಕ್‌ಡೌನ್ ಜಾರಿಗೊಳಿಸಿದ್ದರಿಂದಾಗಿ ಬೇಡಿಕೆ ಕುಸಿದಿದೆ’ ಎಂದು ಕಂಪನಿಯ ಅಧ್ಯಕ್ಷ ಲಕ್ಷ್ಮಿ ಎನ್. ಮಿತ್ತಲ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.