ನವದೆಹಲಿ/ಲಂಡನ್: ಉಕ್ಕು ತಯಾರಿಕಾ ಕಂಪನಿ ಆರ್ಸೆಲ್ಲರ್‌ಮಿತ್ತಲ್, ಆದಿತ್ಯ ಮಿತ್ತಲ್ ಅವರನ್ನು ಹೊಸ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಎಂದು ಘೋಷಿಸಿದೆ.
ಆದಿತ್ಯ ಅವರು ಲಕ್ಷ್ಮಿ ಎನ್. ಮಿತ್ತಲ್ ಅವರ ಮಗ. ಆದಿತ್ಯ ಅವರು ಈಗ ಕಂಪನಿಯ ಮುಖ್ಯ ಹಣಕಾಸು ಅಧಿಕಾರಿಯ (ಸಿಎಫ್‌ಒ) ಹುದ್ದೆಯಲ್ಲಿದ್ದಾರೆ. ಲಕ್ಷ್ಮಿ ಮಿತ್ತಲ್ ಅವರು ಕಂಪನಿಯ ಹಾಲಿ ಸಿಇಒ. ಮಗ ಆ ಹುದ್ದೆಯನ್ನು ವಹಿಸಿಕೊಂಡ ನಂತರ, ಕಂಪನಿಯ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಲಕ್ಷ್ಮಿ ಮಿತ್ತಲ್ ಮುಂದುವರಿಯಲಿದ್ದಾರೆ.
ಆರ್ಸೆಲ್ಲರ್‌ಮಿತ್ತಲ್ ಜಗತ್ತಿನ ಅತಿದೊಡ್ಡ ಉಕ್ಕು ತಯಾರಿಕಾ ಕಂಪನಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.