ನವದೆಹಲಿ: ಉಕ್ಕು ತಯಾರಿಕೆಯಲ್ಲಿ ಮುಂಚೂಣಿಯಲ್ಲಿ ಇರುವ ಆರ್ಸೆಲರ್ ಮಿತ್ತಲ್ ಕಂಪನಿಯ ನಿವ್ವಳ ವರಮಾನವು 2023ರ ಮಾರ್ಚ್ ತ್ರೈಮಾಸಿಕದಲ್ಲಿ ಶೇ 74.43ರಷ್ಟು ಕುಸಿತ ಕಂಡಿದ್ದು ₹ 89,600 ಕೋಟಿಗೆ ಇಳಿದಿದೆ.
2022ರ ಮಾರ್ಚ್ ತ್ರೈಮಾಸಿಕದಲ್ಲಿ ನಿವ್ವಳ ವರಮಾನ ₹ 3.37 ಲಕ್ಷ ಕೋಟಿ ಆಗಿತ್ತು. ನಿವ್ವಳ ಸಾಲವು ₹ 26,240 ಕೋಟಿಯಿಂದ ₹ 42,640 ಕೋಟಿಗೆ ಏರಿಕೆ ಆಗಿದೆ.
ಕಚ್ಚಾ ಉಕ್ಕು ಉತ್ಪಾದನೆಯು 1.63 ಕೋಟಿ ಟನ್‌ಗಳಿಂದ 1.45 ಕೋಟಿ ಟನ್‌ಗೆ ಇಳಿಕೆ ಆಗಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.