ADVERTISEMENT

ಇ–ಕಾರ್ಮಸ್‌ಗೆ ಎ.ಐ ಅಗತ್ಯ: ಹರಿ ಮೆನನ್‌

​ಪ್ರಜಾವಾಣಿ ವಾರ್ತೆ
Published 6 ಜೂನ್ 2024, 13:49 IST
Last Updated 6 ಜೂನ್ 2024, 13:49 IST
ಇಂಡಿಯನ್‌ ಗ್ಲೋಬಲ್‌ ಇನ್ನೋವೇಶನ್‌ ಕನೆಕ್ಟ್‌ ಕಾರ್ಯಕ್ರಮದಲ್ಲಿ ಬಿಗ್‌ ಬಾಸ್ಕೆಟ್‌ನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹರಿ ಮೆನನ್‌ ಮಾತನಾಡಿದರು. ಸ್ವಿಟ್ಜರ್ಲೆಂಡ್‌ನ ಸ್ಮಾಡ್ಜಾ ಆ್ಯಂಡ್‌ ಸ್ಮಾಡ್ಜಾ ಸ್ಟ್ರಾಟೆಜಿಕ್‌ ಅಡ್ವೈಸರಿ ಅಧ್ಯಕ್ಷ ಕ್ಲೌಡ್ ಸ್ಮಾಡ್ಜಾ ಹಾಜರಿದ್ದರು
ಇಂಡಿಯನ್‌ ಗ್ಲೋಬಲ್‌ ಇನ್ನೋವೇಶನ್‌ ಕನೆಕ್ಟ್‌ ಕಾರ್ಯಕ್ರಮದಲ್ಲಿ ಬಿಗ್‌ ಬಾಸ್ಕೆಟ್‌ನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹರಿ ಮೆನನ್‌ ಮಾತನಾಡಿದರು. ಸ್ವಿಟ್ಜರ್ಲೆಂಡ್‌ನ ಸ್ಮಾಡ್ಜಾ ಆ್ಯಂಡ್‌ ಸ್ಮಾಡ್ಜಾ ಸ್ಟ್ರಾಟೆಜಿಕ್‌ ಅಡ್ವೈಸರಿ ಅಧ್ಯಕ್ಷ ಕ್ಲೌಡ್ ಸ್ಮಾಡ್ಜಾ ಹಾಜರಿದ್ದರು   

ಬೆಂಗಳೂರು: ಪ್ರಸ್ತುತ ಇ–ಕಾಮರ್ಸ್‌ ವಲಯವು ಕ್ವಿಕ್‌ ಕಾಮರ್ಸ್‌ ಆಗಿ ಮಾರ್ಪಟ್ಟಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ (ಎ.ಐ) ಸಹಾಯದಿಂದ ಸರಕುಗಳನ್ನು ತ್ವರಿತವಾಗಿ ಗ್ರಾಹಕರಿಗೆ ತಲುಪಿಸಲು ಸಾಧ್ಯವಾಗಿದೆ ಎಂದು ಬಿಗ್‌ ಬಾಸ್ಕೆಟ್‌ನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹರಿ ಮೆನನ್‌ ಹೇಳಿದರು. 

ಗುರುವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಇಂಡಿಯನ್‌ ಗ್ಲೋಬಲ್‌ ಇನ್ನೋವೇಶನ್‌ ಕನೆಕ್ಟ್‌ನ ಮೊದಲ ದಿನದ (ಜೂನ್‌ 6 ಮತ್ತು 7) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎ.ಐ ತಂತ್ರಜ್ಞಾನವು ಇ– ಕಾರ್ಮಸ್‌ ವೇದಿಕೆಗಳ ಕೆಲಸವನ್ನು ತ್ವರಿತವಾಗಿ ಮಾಡುವಂತೆ ಮಾಡಿದ್ದು, ಪ್ರಕ್ರಿಯೆಯನ್ನು ಸುಧಾರಿಸಿದೆ. ಅಷ್ಟೇ ಹೊರತು ಅದರಿಂದ ಉದ್ಯೋಗದ ನಷ್ಟವಾಗುವುದಿಲ್ಲ ಎಂದು ಹೇಳಿದರು.

ತಂತ್ರಜ್ಞಾನದಿಂದ ದಿನಸಿ ಸಾಮಾನುಗಳನ್ನು 10 ನಿಮಿಷಗಳಲ್ಲಿಯೇ ಗ್ರಾಹಕರಿಗೆ ಒದಗಿಸುವಂತಾಗಿದೆ. ಇದರಿಂದ ಅನೇಕ ಕಂಪನಿಗಳ ನಡುವೆ ಸ್ಪರ್ಧೆ ಏರ್ಪಟ್ಟಿದ್ದು, ಗ್ರಾಹಕನಿಗೆ ಗುಣಮಟ್ಟದ ವಸ್ತುಗಳನ್ನು ತಲುಪಿಸಲಾಗುತ್ತಿದೆ ಎಂದರು.

ADVERTISEMENT

ಇ–ಕಾಮರ್ಸ್‌ನಿಂದ ಡಿಜಿಟಲ್‌ ಇನ್ಫ್ರಾಸ್ಟ್ರಕ್ಷರ್‌, ಸರಕುಗಳ ರವಾನೆಗೆ ಅನುಕೂಲವಾಗಿದ್ದು, ಉದ್ಯೋಗಗಳು ಸೃಷ್ಟಿಯಾಗಿವೆ. ಮಹಿಳಾ ಸಬಲೀಕರಣವೂ ಸಾಧ್ಯವಾಗಿದೆ. ಇಂದು ಮೊಬೈಲ್‌ ಮೂಲಕವೇ ವಹಿವಾಟು ನಡೆಯುತ್ತಿದೆ. ಪೇಮೆಂಟ್‌ ಮಾಡುವ ವಿಧಾನವೂ ಬದಲಾಗಿದ್ದು, ನಗದು ಹಣದ ಬಳಕೆ ಕಡಿಮೆಯಾಗಿದೆ. ಹಳ್ಳಿಗಳಲ್ಲಿನ ಸಣ್ಣ ವ್ಯಾಪಾರಕ್ಕೂ ತಂತ್ರಜ್ಞಾನವು ನೆರವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸ್ವಿಟ್ಜರ್ಲೆಂಡ್‌ನ ಸ್ಮಾಡ್ಜಾ ಆ್ಯಂಡ್‌ ಸ್ಮಾಡ್ಜಾ ಸ್ಟ್ರಾಟಜಿಕ್‌ ಅಡ್ವೈಸರಿಯ ಅಧ್ಯಕ್ಷ ಕ್ಲೌಡ್ ಸ್ಮಾಡ್ಜಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.