ADVERTISEMENT

ವಾಣಿಜ್ಯ ಸಿಲಿಂಡರ್‌ ದರ ₹39 ಏರಿಕೆ

ಪಿಟಿಐ
Published 1 ಸೆಪ್ಟೆಂಬರ್ 2024, 13:39 IST
Last Updated 1 ಸೆಪ್ಟೆಂಬರ್ 2024, 13:39 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು 19 ಕೆ.ಜಿ ತೂಕದ ವಾಣಿಜ್ಯ ಬಳಕೆಯ ಸಿಲಿಂಡರ್‌ ಬೆಲೆಯನ್ನು ₹39 ಏರಿಕೆ ಮಾಡಿವೆ.  

ಏಪ್ರಿಲ್‌ನಿಂದ ಜೂನ್‌ವರೆಗೆ ಸಿಲಿಂಡರ್‌ ಬೆಲೆಯನ್ನು ₹148 ಕಡಿತಗೊಳಿಸಿದ್ದ ತೈಲ ಕಂಪನಿಗಳು, ಆಗಸ್ಟ್‌ನಲ್ಲಿ ₹6.5 ಏರಿಕೆ ಮಾಡಿದ್ದವು.  

ಸದ್ಯ ದೆಹಲಿಯಲ್ಲಿ ಸಿಲಿಂಡರ್‌ ಬೆಲೆ ₹1,691.50, ಮುಂಬೈನಲ್ಲಿ ₹1,644, ಕೋಲ್ಕತ್ತ ₹1,802.50 ಹಾಗೂ ಚೆನ್ನೈನಲ್ಲಿ ₹1,855 ಆಗಿದೆ. 14.2 ಕೆ.ಜಿ ತೂಕದ ಅಡುಗೆ ಅನಿಲ ಸಿಲಿಂಡರ್‌ ಬೆಲೆಯನ್ನು ಪರಿಷ್ಕರಿಸಿಲ್ಲ. ಇದರ ಬೆಲೆ ಸದ್ಯ ₹803 ಇದೆ.

ADVERTISEMENT

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ದರ ಏರಿಕೆ ಹಾಗೂ ವಿದೇಶಿ ವಿನಿಮಯ ದರಕ್ಕೆ ಅನುಗುಣವಾಗಿ ತೈಲ ಮಾರಾಟ ಕಂಪನಿಗಳು ಈ ದರ ಪರಿಷ್ಕರಣೆ ಮಾಡುತ್ತವೆ.

ಎಟಿಎಫ್‌ ದರ ಇಳಿಕೆ: ವಿಮಾನ ಇಂಧನ (ಎಟಿಎಫ್) ದರವನ್ನು ಶೇ 4.6ರಷ್ಟು ಕಡಿತಗೊಳಿಸಲಾಗಿದೆ. ಒಟ್ಟಾರೆ ಕಿಲೋ ಲೀಟರಿಗೆ ₹4,495 ಇಳಿಕೆ ಮಾಡಲಾಗಿದೆ (ಒಂದು ಕಿಲೋ ಲೀಟರ್‌ ಎಂದರೆ ಒಂದು ಸಾವಿರ ಲೀಟರ್). ದೆಹಲಿಯಲ್ಲಿ ಪ್ರತಿ ಕಿಲೋ ಲೀಟರ್ ಬೆಲೆಯು ₹93,480ಕ್ಕೆ ಇಳಿಕೆಯಾಗಿದೆ.

ಕಳೆದ ಎರಡು ತಿಂಗಳಿನಲ್ಲಿ ಎಟಿಎಫ್‌ ಬೆಲೆಯನ್ನು ಏರಿಕೆ ಮಾಡಲಾಗಿತ್ತು.  

ಭಾನುವಾರ ಮುಂಬೈನಲ್ಲಿ ಎಟಿಎಫ್‌ ಬೆಲೆ ಪ್ರತಿ ಕಿಲೋ ಲೀಟರ್‌ಗೆ ₹87,432 ಆಗಿದೆ. ರಾಜ್ಯದಿಂದ ರಾಜ್ಯಕ್ಕೆ ಈ ದರದಲ್ಲಿ ವ್ಯತ್ಯಾಸ ಇರುತ್ತದೆ.

ವಿಮಾನಗಳ ಕಾರ್ಯಾಚರಣೆಯಲ್ಲಿ ಶೇ 40ರಷ್ಟು ಹಣವು ಇಂಧನಕ್ಕೆ ವೆಚ್ಚವಾಗುತ್ತದೆ. ಹಾಗಾಗಿ, ಬೆಲೆ ಇಳಿಕೆಯು ಕಂಪನಿಗಳಿಗೆ ವರದಾನವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.