ADVERTISEMENT

ವಿಮಾನ ಇಂಧನ ದರ ಶೇ 2.96ರಷ್ಟು ಏರಿಕೆ

ಪಿಟಿಐ
Published 16 ಜನವರಿ 2021, 11:45 IST
Last Updated 16 ಜನವರಿ 2021, 11:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಿಮಾನ ಇಂಧನ (ಎಟಿಎಫ್‌) ದರವನ್ನು ಶನಿವಾರ ಶೇ 2.96ರಷ್ಟು ಏರಿಕೆ ಮಾಡಲಾಗಿದೆ. ಎರಡು ತಿಂಗಳಿನಲ್ಲಿ ನಾಲ್ಕನೇ ಬಾರಿಗೆ ಹೆಚ್ಚಳ ಮಾಡಲಾಗಿದೆ.

ದೆಹಲಿಯಲ್ಲಿ ವಿಮಾನ ಇಂಧನ ದರ ಪ್ರತಿ ಕಿಲೊ ಲೀಟರ್‌ಗೆ ₹ 1,512ರಷ್ಟು (ಶೇ 2.96) ಹೆಚ್ಚಿಸಲಾಗಿದ್ದು, ₹ 52,491ಕ್ಕೆ ತಲುಪಿದೆ. ಮುಂಬೈನಲ್ಲಿ ₹ 49,083 ರಿಂದ ₹ 50,596ಕ್ಕೆ ಏರಿಕೆಯಾಗಿದೆ. ಸ್ಥಳೀಯವಾಗಿ ವಿಧಿಸುವ ತೆರಿಗೆಗೆ ಅನುಗುಣವಾಗಿ ರಾಜ್ಯದಿಂದ ರಾಜ್ಯಕ್ಕೆ ಬೆಲೆಯಲ್ಲಿ ವ್ಯತ್ಯಾಸ ಆಗಲಿದೆ.

2020ರ ಡಿಸೆಂಬರ್ 1 ರಿಂದ ಇದು ನಾಲ್ಕನೇ ಬಾರಿಗೆ ದರದಲ್ಲಿ ಏರಿಕೆ ಮಾಡಲಾಗಿದೆ. ಡಿಸೆಂಬರ್ 1 ರಂದು ಶೇ 7.6ರಷ್ಟು, ಡಿಸೆಂಬರ್‌ 16ರಂದು ಶೇ 6.3ರಷ್ಟು ಹಾಗೂ ಜನವರಿ 1 ರಂದು ಶೇ 3.69ರಷ್ಟು ಹೆಚ್ಚಿಸಲಾಗಿತ್ತು. ಅಂತರರಾಷ್ಟ್ರೀಯ ದರ ಮತ್ತು ವಿದೇಶಿ ವಿನಿಮಯ ದರಕ್ಕೆ ಅನುಗುಣವಾಗಿ ಪ್ರತಿ ತಿಂಗಳೂ 1 ರಿಂದ 16ರವರೆಗೆ ಇಂಧನ ದರದಲ್ಲಿ ಪರಿಷ್ಕರಣೆ ಮಾಡಲಾಗುತ್ತದೆ.

ADVERTISEMENT

ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.