ಮುಂಬೈ: ಎಟಿಎಂ ಮೂಲಕ ನಗದು ಪಡೆಯುವುದು ಹಾಗೂ ಇತರ ಸೇವೆಗಳಿಗೆ ವಿಧಿಸುವ ಶುಲ್ಕವನ್ನು ಹೆಚ್ಚಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬ್ಯಾಂಕ್‌ಗಳಿಗೆ ಅನುಮತಿ ನೀಡಿದೆ. ಪ್ರತಿ ತಿಂಗಳು ನಿರ್ದಿಷ್ಟ ಸಂಖ್ಯೆಗಿಂತ ಹೆಚ್ಚು ಬಾರಿ ಎಟಿಎಂನಿಂದ ಹಣ ಪಡೆದರೆ ಅಥವಾ ಇತರ ಸೇವೆಗಳನ್ನು ಪಡೆದರೆ ಶುಲ್ಕ ವಿಧಿಸಲಾಗುತ್ತದೆ.
2022ರ ಜನವರಿ 1ರಿಂದ ಶುಲ್ಕ ಹೆಚ್ಚಿಸಲು ಆರ್‌ಬಿಐ ಒಪ್ಪಿಗೆ ಸೂಚಿಸಿದೆ. ತಿಂಗಳ ಉಚಿತ ವಹಿವಾಟಿನ ನಂತರ ಪ್ರತಿ ವಹಿವಾಟಿಗೆ ₹ 21 ಶುಲ್ಕ ವಿಧಿಸಲು ಬ್ಯಾಂಕ್‌ಗಳಿಗೆ ಅವಕಾಶ ದೊರೆತಿದೆ. ಈಗ ₹ 20 ಶುಲ್ಕ ವಿಧಿಸಲಾಗುತ್ತಿದೆ.
‘ಬ್ಯಾಂಕ್‌ಗಳ ವೆಚ್ಚಗಳು ಹೆಚ್ಚಾಗಿರುವ ಕಾರಣ, ಡೆಬಿಟ್ ಕಾರ್ಡ್ ನೀಡಿರುವ ಬ್ಯಾಂಕ್‌ನಿಂದ ಎಟಿಎಂ ನಿರ್ವಹಿಸುವ ಬ್ಯಾಂಕ್‌ಗೆ ನೀಡಬೇಕಿರುವ ಶುಲ್ಕ ಕೂಡ ಜಾಸ್ತಿ ಇರುವುದರಿಂದ ಗ್ರಾಹಕರಿಂದ ಪಡೆಯುವ ಸೇವಾ ಶುಲ್ಕ ಹೆಚ್ಚಿಸಲು ಅನುಮತಿ ನೀಡಲಾಗಿದೆ’ ಎಂದು ಆರ್‌ಬಿಐ ಹೇಳಿದೆ.
ಗ್ರಾಹಕರು ತಮ್ಮ ಖಾತೆ ಇರುವ ಬ್ಯಾಂಕ್‌ನ ಎಟಿಎಂ ಮೂಲಕ ತಿಂಗಳಿಗೆ ಐದು ಉಚಿತ ವಹಿವಾಟು, ಬೇರೆ ಬ್ಯಾಂಕ್ ಎಟಿಎಂ ಮೂಲಕ ತಿಂಗಳಿಗೆ ಮೂರು ಉಚಿತ ವಹಿವಾಟು ನಡೆಸಲು ಈಗಿನಂತೆಯೇ ಅವಕಾಶ ಇರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.