ಮುಂಬೈ: ಕೆಂಪು ಸಮುದ್ರದ ಬಿಕ್ಕಟ್ಟು ವಾಹನ ಬಿಡಿಭಾಗಗಳ ಉದ್ಯಮದ ಮೇಲೆ ಪರಿಣಾಮ ಬೀರಿದೆ. ಹಾಗಾಗಿ, ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದಲ್ಲಿ ಈ ಉದ್ಯಮದ ಬೆಳವಣಿಗೆಯು ಮಂದಗತಿಯಲ್ಲಿ ಇರಲಿದೆ ಎಂದು ಕ್ರೆಡಿಟ್ ರೇಟಿಂಗ್ ಏಜೆನ್ಸಿ ಐಸಿಆರ್‌ಎ ಗುರುವಾರ ಅಂದಾಜಿಸಿದೆ.
ಕೆಂಪು ಸಮುದ್ರದ ಬಿಕ್ಕಟ್ಟಿನಿಂದಾಗಿ ಸರಕು ಸಾಗಣೆಗೆ ಅಡ್ಡಿಯಾಗಿದೆ. ಕಂಟೇನರ್‌ಗಳಲ್ಲಿ ಸಾಗಣೆ ವೆಚ್ಚವು ಕಳೆದ ವರ್ಷಕ್ಕೆ ಹೋಲಿಸಿದರೆ 2ರಿಂದ 3 ಪಟ್ಟು ಏರಿಕೆಯಾಗಿದೆ. ಸಾಗಣೆ ಅವಧಿಯೂ ಎರಡು ವಾರಗಳಷ್ಟು ಹೆಚ್ಚಾಗಿದೆ ಎಂದು ಹೇಳಿದೆ.
ದೇಶದಿಂದ ಉತ್ತರ ಅಮೆರಿಕ ಮತ್ತು ಯುರೋಪ್‌ಗೆ ಮೂರನೇ ಎರಡರಷ್ಟು ವಾಹನದ ಬಿಡಿ ಭಾಗಗಳನ್ನು ರಫ್ತು ಮಾಡಲಾಗುತ್ತದೆ. ಮೂರನೇ ಒಂದು ಭಾಗದಷ್ಟು ಆಮದು ಪ್ರಕ್ರಿಯೆಯು ಕೆಂಪು ಸಮುದ್ರದ ಮಾರ್ಗವಾಗಿಯೇ ನಡೆಯುತ್ತದೆ ಎಂದು ತಿಳಿಸಿದೆ.
2023–24ನೇ ಹಣಕಾಸು ವರ್ಷದಲ್ಲಿ ಭಾರತದ ವಾಹನ ಬಿಡಿಭಾಗಗಳ ಉದ್ಯಮವು ಶೇ 14ರಷ್ಟು ಬೆಳವಣಿಗೆ ದಾಖಲಿಸಿತ್ತು. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ 5ರಿಂದ 7ರಷ್ಟು ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.