ADVERTISEMENT

ಯುಪಿಐ ಸ್ವಯಂಚಾಲಿತ ಪಾವತಿ ಮಿತಿ ₹1ಲಕ್ಷಕ್ಕೆ ಏರಿಕೆ: ಆರ್‌ಬಿಐ

ಪಿಟಿಐ
Published 12 ಡಿಸೆಂಬರ್ 2023, 16:17 IST
Last Updated 12 ಡಿಸೆಂಬರ್ 2023, 16:17 IST
ಯುಪಿಐ 
ಯುಪಿಐ    

ಮುಂಬೈ: ಯುಪಿಐ ಮೂಲಕ ನಡೆಸುವ ಸ್ವಯಂಚಾಲಿತ ಪಾವತಿಗಳ ಮಿತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಂಗಳವಾರ ₹1 ಲಕ್ಷಕ್ಕೆ ಹೆಚ್ಚಿಸಿದೆ.

ಮ್ಯೂಚುವಲ್ ಫಂಡ್‌ಗಳಿಗೆ ಚಂದಾದಾರಿಕೆ, ವಿಮಾ ಕಂತುಗಳ ಪಾವತಿ ಮತ್ತು ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗಳಿಗಾಗಿ ಪ್ರತಿ ವಹಿವಾಟಿಗೆ ₹15 ಸಾವಿರದಿಂದ ₹1 ಲಕ್ಷಕ್ಕೆ ಮಿತಿ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಆರ್‌ಬಿಐ ತಿಳಿಸಿದೆ.

ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರು ಕಳೆದ ವಾರ ಡಿಸೆಂಬರ್ ದ್ವೈಮಾಸಿಕ ಹಣಕಾಸು ನೀತಿಯನ್ನು ಅನಾವರಣಗೊಳಿಸುವ ವೇಳೆ ಈ ಬಗ್ಗೆ ಘೋಷಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.