ನವದೆಹಲಿ: ವಾಹನಗಳ ರಿಟೇಲ್ ಮಾರಾಟವು ಫೆಬ್ರುವರಿಯಲ್ಲಿ ಎರಡಂಕಿ ಪ್ರಗತಿ ಕಂಡಿದೆ ಎಂದು ವಾಹನ ವಿತರಕರ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ಸೋಮವಾರ ತಿಳಿಸಿದೆ.
ಪ್ರಯಾಣಿಕ ವಾಹನ ಒಳಗೊಂಡು ಎಲ್ಲ ವಿಭಾಗಗಳಲ್ಲಿ ಮಾರಾಟ ಹೆಚ್ಚಾಗಿದೆ. ಇದರಿಂದಾಗಿ ಉತ್ತಮ ಬೆಳವಣಿಗೆ ಕಾಣುವಂತಾಗಿದೆ ಎಂದು ಅದು ಹೇಳಿದೆ.
2022ರ ಫೆಬ್ರುವರಿಯಲ್ಲಿ 15.31 ಲಕ್ಷ ವಾಹನಗಳು ಮಾರಾಟ ಆಗಿದ್ದವು. 2023ರ ಫೆಬ್ರುವರಿಯಲ್ಲಿ ಮಾರಾಟವು 17.75 ಲಕ್ಷಕ್ಕೆ ತಲುಪಿದೆ. ಪ್ರಮಾಣದ ಲೆಕ್ಕದಲ್ಲಿ ಶೇ 16ರಷ್ಟು ಹೆಚ್ಚಾಗಿದೆ. ಪ್ರಯಾಣಿಕ ವಾಹನ ಮಾರಾಟ ಶೇ 11ರಷ್ಟು, ದ್ವಿಚಕ್ರ ವಾಹನ ಮಾರಾಟ ಶೇ 15ರಷ್ಟು ಹೆಚ್ಚಾಗಿದೆ.
ಹೊಸ ಮಾದರಿಗಳ ಬಿಡುಗಡೆ, ಪೂರೈಕೆ ಸುಧಾರಿಸುತ್ತಿರುವುದು ಮತ್ತು ಮದುವೆ ಸಮಾರಂಭಗಳ ಋತು ವಾಹನ ಬೇಡಿಕೆ ಮೇಲೆ ಪ್ರಭಾವ ಬೀರಿವೆ ಎಂದು ಒಕ್ಕೂಟದ ಅಧ್ಯಕ್ಷ ಮನೀಶ್ ರಾಜ್ ಸಿಂಘಾನಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.