ADVERTISEMENT

ಎಕ್ಸಿಸ್ ಬ್ಯಾಂಕ್ ನಿವ್ವಳ ಲಾಭ ಏರಿಕೆ

ಪಿಟಿಐ
Published 28 ಏಪ್ರಿಲ್ 2022, 15:29 IST
Last Updated 28 ಏಪ್ರಿಲ್ 2022, 15:29 IST

ನವದೆಹಲಿ: ಮಾರ್ಚ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ನಿವ್ವಳ ಲಾಭದಲ್ಲಿ ಶೇಕಡ 54ರಷ್ಟು ಏರಿಕೆ ಆಗಿದ್ದು, ₹ 4,117 ಕೋಟಿಗೆ ತಲುಪಿದೆ ಎಂದು ಎಕ್ಸಿಸ್ ಬ್ಯಾಂಕ್ ತಿಳಿಸಿದೆ.

ದೇಶದ ಮೂರನೆಯ ಅತಿದೊಡ್ಡ ಖಾಸಗಿ ಬ್ಯಾಂಕ್ ಆಗಿರುವ ಎಕ್ಸಿಸ್‌ ಬ್ಯಾಂಕ್, ಹಿಂದಿನ ವರ್ಷದ ಇದೇ ಅವಧಿಯಲ್ಲಿ ₹ 2,677 ಕೋಟಿ ನಿವ್ವಳ ಲಾಭ ಗಳಿಸಿತ್ತು.

ಮಾರ್ಚ್‌ ತ್ರೈಮಾಸಿಕದಲ್ಲಿ ಬ್ಯಾಂಕ್‌ನ ಒಟ್ಟು ಆದಾಯವು ₹ 21,999 ಕೋಟಿಗೆ ತಲುಪಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಒಟ್ಟು ಆದಾಯವು ₹ 19,035 ಕೋಟಿ ಆಗಿತ್ತು ಎಂದು ಎಕ್ಸಿಸ್ ಬ್ಯಾಂಕ್ ಷೇರುಪೇಟೆಗೆ ಮಾಹಿತಿ ನೀಡಿದೆ.

ADVERTISEMENT

ಮಾರ್ಚ್‌ಗೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಬ್ಯಾಂಕ್‌ನ ನಿವ್ವಳ ಲಾಭವು ಸರಿಸುಮಾರು ಎರಡು ಪಟ್ಟು ಹೆಚ್ಚಾಗಿದೆ. 2020–21ರಲ್ಲಿ ಬ್ಯಾಂಕ್‌ನ ನಿವ್ವಳ ಲಾಭವು ₹ 6,588 ಕೋಟಿ ಆಗಿತ್ತು. ಈ ವರ್ಷದಲ್ಲಿ ಅದು ₹ 13,025 ಕೋಟಿಗೆ ಏರಿಕೆ ಆಗಿದೆ. ಮಾರ್ಚ್‌ ಅಂತ್ಯಕ್ಕೆ ಬ್ಯಾಂಕ್‌ನ ಅನುತ್ಪಾದಕ ಸಾಲದ ಪ್ರಮಾಣವು ಶೇ 2.82ಕ್ಕೆ ತಲುಪಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.