ADVERTISEMENT

ಎಕ್ಸಿಸ್‌ ಬ್ಯಾಂಕ್‌ ಲಾಭ ಹೆಚ್ಚಳ

ಪಿಟಿಐ
Published 24 ಜುಲೈ 2024, 15:48 IST
Last Updated 24 ಜುಲೈ 2024, 15:48 IST
<div class="paragraphs"><p>&nbsp;ಎಕ್ಸಿಸ್‌</p></div>

 ಎಕ್ಸಿಸ್‌

   

ನವದೆಹಲಿ: ಖಾಸಗಿ ವಲಯದ ಎಕ್ಸಿಸ್‌ ಬ್ಯಾಂಕ್‌, 2024–25ನೇ  ಹಣಕಾಸು ವರ್ಷದ ಜೂನ್‌ ತ್ರೈಮಾಸಿಕದಲ್ಲಿ ₹6,035 ಕೋಟಿ ನಿವ್ವಳ ಲಾಭ ಗಳಿಸಿದೆ. 

2023–24ರ ಇದೇ ಅವಧಿಯಲ್ಲಿ ಬ್ಯಾಂಕ್‌ ₹5,797 ಕೋಟಿ ಲಾಭ ಗಳಿಸಿತ್ತು. ಲಾಭದಲ್ಲಿ ಶೇ 4ರಷ್ಟು ಏರಿಕೆಯಾಗಿದೆ. ಹೆಚ್ಚಿನ ಬಡ್ಡಿ ವರಮಾನದಿಂದ ಲಾಭದ ಪ್ರಮಾಣ ಏರಿಕೆಯಾಗಿದೆ ಎಂದು ಬ್ಯಾಂಕ್‌ ಷೇರುಪೇಟೆಗೆ ಬುಧವಾರ ತಿಳಿಸಿದೆ.

ADVERTISEMENT

ಬಡ್ಡಿ ವರಮಾನವು ಹಿಂದಿನ ಹಣಕಾಸು ವರ್ಷದ ಜೂನ್‌ ತ್ರೈಮಾಸಿಕದಲ್ಲಿ ₹25,556 ಕೋಟಿ ದಾಖಲಾಗಿತ್ತು. ಈ ತ್ರೈಮಾಸಿಕದಲ್ಲಿ ₹30,060 ಕೋಟಿಗೆ ಏರಿಕೆಯಾಗಿದೆ. 

ವಸೂಲಾಗದ ಸಾಲದ ಸರಾಸರಿ ಪ್ರಮಾಣ (ಜಿಎನ್‌ಪಿಎ) ಶೇ 1.96ರಿಂದ ಶೇ 1.54ಕ್ಕೆ ಇಳಿದಿದೆ. ನಿವ್ವಳ ಎನ್‌ಪಿಎ ಶೇ 0.41ರಿಂದ ಶೇ 0.34ಕ್ಕೆ ಕುಗ್ಗಿದೆ ಎಂದು ಬ್ಯಾಂಕ್‌ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.