ADVERTISEMENT

ವಿಪ್ರೊ ಸ್ಥಾಪಕ ಅಜೀಮ್‌ ಪ್ರೇಮ್‌ಜಿ ದಾನದಲ್ಲಿ ಮೊದಲಿಗ

ಪಿಟಿಐ
Published 28 ಅಕ್ಟೋಬರ್ 2021, 22:26 IST
Last Updated 28 ಅಕ್ಟೋಬರ್ 2021, 22:26 IST
ಪ್ರೇಮ್‌ಜಿ
ಪ್ರೇಮ್‌ಜಿ   

ಮುಂಬೈ: ದೇಶದ ಪ್ರಮುಖ ಸಾಫ್ಟ್‌ವೇರ್ ಕಂಪನಿಗಳಲ್ಲಿ ಒಂದಾದ ವಿಪ್ರೊ ಸ್ಥಾಪಕ ಅಜೀಮ್‌ ಪ್ರೇಮ್‌ಜಿ ಅವರು 2020–21ನೇ ಆರ್ಥಿಕ ವರ್ಷದಲ್ಲಿಯೂ ದೇಶದ ದಾನಿಗಳಲ್ಲಿ ಮೊದಲಿಗ ಅನಿಸಿಕೊಂಡಿದ್ದಾರೆ. ಅವರು ಈ ವರ್ಷದಲ್ಲಿ ದಾನ ನೀಡಿದ ಮೊತ್ತ ₹9,713 ಕೋಟಿ. ಅಂದರೆ, ಪ್ರತಿ ದಿನ ಅವರು ₹27 ಕೋಟಿ ದಾನ ನೀಡಿದಂತಾಗಿದೆ.

ದೇಶವು ಕೋವಿಡ್‌ ಸಾಂಕ್ರಾಮಿಕದಿಂದ ಸಂಕಷ್ಟಕ್ಕೆ ಒಳಗಾದ ವರ್ಷದಲ್ಲಿ ಅಜೀಮ್‌ ಅವರು ತಮ್ಮ ದಾನದ ಪ್ರಮಾಣವನ್ನು ನಾಲ್ಕನೇ ಒಂದರಷ್ಟು ಹೆಚ್ಚಳ ಮಾಡಿದ್ದಾರೆ.

ಎಡೆಲ್‌ಗಿವ್ ಹುರುನ್‌ ಇಂಡಿಯಾ ಫಿಲಾಂಥ್ರಪಿ ಪಟ್ಟಿ 2021ರಲ್ಲಿ ಈ ಮಾಹಿತಿ ಇದೆ. ಈ ಪಟ್ಟಿಯ ಪ್ರಕಾರ, ಎಚ್‌ಸಿಎಲ್‌ನ ಶಿವ ನಾಡಾರ್‌ ಅವರು ಎರಡನೇ ಸ್ಥಾನದಲ್ಲಿದ್ದಾರೆ. ಅವರ ದಾನದ ಮೊತ್ತವು ₹1,263 ಕೋಟಿ.

ADVERTISEMENT

ದೇಶದ ಅತ್ಯಂತ ದೊಡ್ಡ ಶ್ರೀಮಂತ, ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರು ₹577 ಕೋಟಿ ದಾನ ನೀಡಿದ್ದಾರೆ. ₹377 ಕೋಟಿ ದಾನ ಮಾಡಿರುವ ಕುಮಾರಮಂಗಲಂ ಬಿರ್ಲಾ ಮತ್ತು ₹183 ಕೋಟಿ ದಾನ ನೀಡಿರುವ ನಂದನ್‌ ನಿಲೇಕಣಿ ಅವರು 4 ಮತ್ತು 5ನೇ ಸ್ಥಾನಗಳಲ್ಲಿದ್ದಾರೆ. ದೇಶದ ಎರಡನೇ ಅತಿ ದೊಡ್ಡ ಶ್ರೀಮಂತ ಗೌತಮ್‌ ಅದಾನಿ ಅವರು ₹130 ಕೋಟಿ ದಾನ ಕೊಟ್ಟಿದ್ದಾರೆ. ಅವರು ಎಂಟನೇ ಸ್ಥಾನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.