ಬೆಂಗಳೂರು: ಬಜಾಜ್ ಫೈನ್‌ಸರ್ವ್ ಭಾಗವಾಗಿರುವ ಬಜಾಜ್ ಫೈನಾನ್ಸ್ ಲಿಮಿಟೆಡ್‌ನಿಂದ ಡಿಜಿಟಲ್ ಫಿಕ್ಸ್ಡ್ ಡಿಪಾಸಿಟ್ (ಎಫ್‌ಡಿ) ಆರಂಭಿಸಲಾಗಿದೆ.
ಸಂಸ್ಥೆಯ ಆ್ಯಪ್ ಮತ್ತು ವೆಬ್‌ಸೈಟ್ ಮೂಲಕ ಠೇವಣಿ ಇಡುವ ಠೇವಣಿದಾರರಿಗೆ ಶೇ 8.85ರವರೆಗೆ ಬಡ್ಡಿ ನೀಡಲಾಗುವುದು ಎಂದು ಕಂಪನಿ ತಿಳಿಸಿದೆ.
ಗ್ರಾಹಕರು ಠೇವಣಿ ಇಡಲು ಡಿಜಿಟಲ್ ಮತ್ತು ಡಿಜಿಟಲ್ ಆಧಾರಿತ ಮಾದರಿ ಬಳಸುವುದನ್ನು ಉತ್ತೇಜಿಸಲು ಈ ಯೋಜನೆ ಆರಂಭಿಸಿರುವ. ಈ ಸೇವೆಗೆ ಒಂದು ವರ್ಷ ಪೂರ್ಣಗೊಂಡಿದೆ. ಬಜಾಜ್ ಫೈನ್‌ಸರ್ವ್ ಆ್ಯಪ್ ಮತ್ತು ವೆಬ್‌ಸೈಟ್‌ನಲ್ಲಿ ಗ್ರಾಹಕರು ಸುಲಭವಾಗಿ ಹಾಗೂ ತಡೆರಹಿತವಾಗಿ ಠೇವಣಿಯನ್ನು ಬುಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದೆ.
ಜನವರಿ 2ರಿಂದ ಶೇ 8.85ರ ವರೆಗಿನ ಪರಿಷ್ಕೃತ ಬಡ್ಡಿದರ ಜಾರಿಗೆ ಬಂದಿದೆ. ಈ ಬಡ್ಡಿದರ ಹಿರಿಯ ನಾಗರಿಕರಿಗೆ ಅನ್ವಯವಾಗಲಿದೆ. ಕನಿಷ್ಠ 42 ತಿಂಗಳ ಕಾಲ ಠೇವಣಿ ಇಡಬೇಕಿದೆ.
ಇನ್ನು 60 ವರ್ಷಕ್ಕಿಂತ ಕೆಳಗಿನ ಠೇವಣಿದಾರರಿಗೆ ಶೇ 8.60ರ ವರೆಗೆ ಬಡ್ಡಿ ಲಭ್ಯವಾಗಲಿದೆ. ಈ ಪರಿಷ್ಕೃತ ಬಡ್ಡಿದರವು ಹೊಸದಾಗಿ ಠೇವಣಿ ಇಡುವವರಿಗೆ ಮತ್ತು ಠೇವಣಿಯನ್ನು ನವೀಕರಣ ಮಾಡಿಸುವವರಿಗೆ ಅನ್ವಯವಾಗಲಿದೆ. 42 ತಿಂಗಳ ಅವಧಿಗೆ ಮತ್ತು ಗರಿಷ್ಠ ₹5 ಕೋಟಿವರೆಗೆ ಅನ್ವಯವಾಗಲಿದೆ ಎಂದು ಮಾಹಿತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.