ನವದೆಹಲಿ: ಹಾಂಗ್‌ಕಾಂಗ್ ಮತ್ತು ಸಿಂಗಪುರದಲ್ಲಿ ಎಂಡಿಎಚ್ ಹಾಗೂ ಎವರೆಸ್ಟ್ ಮಸಾಲೆ ಪದಾರ್ಥಗಳಿಗೆ ನಿಷೇಧ ಹೇರಿರುವುದಕ್ಕೆ ಸಂಬಂಧಿಸಿದಂತೆ ಅಲ್ಲಿನ ಆಹಾರ ಸುರಕ್ಷತೆ ಕೇಂದ್ರಗಳು ಸಿದ್ಧಪಡಿಸಿರುವ ವರದಿಯನ್ನು ಪರಿಶೀಲಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ನಿಷೇಧಕ್ಕೆ ಸಂಬಂಧಿಸಿದ ತಾಂತ್ರಿಕ ವಿವರ ಹಾಗೂ ವಿಶ್ಲೇಷಣಾತ್ಮಕ ವರದಿ ರವಾನಿಸುವಂತೆ ಎರಡು ದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳಿಗೆ ಕೇಂದ್ರ ವಾಣಿಜ್ಯ ಸಚಿವಾಲಯವು ನಿರ್ದೇಶನ ನೀಡಿದೆ.
ಎಂಡಿಎಚ್‌ನ ಮೂರು ಹಾಗೂ ಎವರೆಸ್ಟ್‌ನ ಒಂದು ಪದಾರ್ಥದಲ್ಲಿ ಕ್ಯಾನ್ಸರ್‌ಕಾರಕ ಎಥಿಲೀನ್ ಆಕ್ಸೈಡ್ ಎಂಬ ಕೀಟನಾಶಕ ಅಂಶ ಪತ್ತೆಯಾಗಿದೆ ಎಂಬ ಆರೋಪದ ಮೇರೆಗೆ ಇವುಗಳ ಮಾರಾಟ ಮತ್ತು ಬಳಕೆಗೆ ನಿಷೇಧ ಹೇರಲಾಗಿದೆ.
ಎರಡು ಕಂಪನಿಗಳಿಂದಲೂ ಈ ಬಗ್ಗೆ ವಿವರ ಕೇಳಲಾಗಿದೆ. ನಿಷೇಧಕ್ಕೆ ಮೂಲ ಕಾರಣ ಏನೆಂಬುದರ ಬಗ್ಗೆ ಪರಿಶೀಲಿಸಲಾಗುವುದು. ಆ ನಂತರ ಸೂಕ್ತ ಕ್ರಮಕೈಗೊಳ್ಳಲಾಗುವುದು’ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.