ನವದೆಹಲಿ: ಖಾಸಗಿ ವಲಯದ ಬಂಧನ್ ಬ್ಯಾಂಕ್‌ನ ಸಿಇಒ ಮತ್ತು ಎಂಡಿ ಚಂದ್ರಶೇಖರ್ ಘೋಷ್ ಅವರನ್ನು ಮರು ನೇಮಕ ಮಾಡಲು ಆರ್‌ಬಿಐ ಒಪ್ಪಿಗೆ ನೀಡಿದೆ.
ಘೋಷ್ ಅವರ ಮರು ನೇಮಕ ಅವಧಿಯು ಮೂರು ವರ್ಷಗಳ ಅವಧಿಗೆ ಇರಲಿದೆ ಎಂದು ಮುಂಬೈ ಷೇರುಪೇಟೆಗೆ ಮಾಹಿತಿ ನೀಡಿದೆ.
2015ರ ಆಗಸ್ಟ್ 23ರಲ್ಲಿ ಬ್ಯಾಂಕ್ ತನ್ನ ಕಾರ್ಯಾಚರಣೆ ಆರಂಭಿಸಿತು. ಸ್ಥಾಪಕ ಘೋಷ್ ಅವರಿಗೆ ಕಿರು ಹಣಕಾಸು ಉದ್ಯಮದಲ್ಲಿ 37 ವರ್ಷಗಳ ಅನುಭವವಿದೆ.
2017–18ರಲ್ಲಿ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ₹ 4,473 ಕೋಟಿ ಸಂಗ್ರಹಿಸಿ ಷೇರುಪೇಟೆ ವಹಿವಾಟಿಗೆ ಕಾಲಿಟ್ಟಿದೆ.
2017–18ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ₹ 388 ಕೋಟಿ ಲಾಭ ಗಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.