ADVERTISEMENT

ಸಾಲ, ಮುಂಗಡ ನೀಡಿಕೆ ಶೇ 22ರಷ್ಟು ಹೆಚ್ಚಳ: ಬಂಧನ್ ಬ್ಯಾಂಕ್‌

ಪಿಟಿಐ
Published 8 ಅಕ್ಟೋಬರ್ 2022, 10:35 IST
Last Updated 8 ಅಕ್ಟೋಬರ್ 2022, 10:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: 2022ರ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಸಾಲ ಮತ್ತು ಮುಂಗಡವು ಶೇ 22ರಷ್ಟು ಏರಿಕೆ ಆಗಿದ್ದು ₹99,374 ಕೋಟಿಗೆ ತಲುಪಿದೆ ಎಂದು ಬಂಧನ್‌ ಬ್ಯಾಂಕ್‌ ಶನಿವಾರ ತಿಳಿಸಿದೆ.

ಹಿಂದಿನ ವರ್ಷದ ಇದೇ ಅವಧಿಯಲ್ಲಿ ಬ್ಯಾಂಕ್‌ನ ಸಾಲ ಮತ್ತು ಮುಂಗಡದ ಮೊತ್ತವು ₹81,661 ಕೋಟಿ ಇತ್ತು.

ಬ್ಯಾಂಕ್‌ನ ಒಟ್ಟು ಠೇವಣಿ ಮೊತ್ತವು ₹81,898 ಕೋಟಿಯಿಂದ ₹99,365 ಕೋಟಿಗೆ ಶೇ 21ರಷ್ಟು ಏರಿಕೆ ಕಂಡಿದೆ. ಠೇವಣಿಯಲ್ಲಿ ರಿಟೇಲ್‌ ಠೇವಣಿಗಳ ಪ್ರಮಾಣವು ಶೇ 74ರಷ್ಟು ಆಗಿದೆ.

ADVERTISEMENT

ಈ ಅಂಕಿ–ಅಂಶಗಳು ತಾತ್ಕಾಲಿಕ ಆಗಿದ್ದು, ಲೆಕ್ಕಪತ್ರ ಸಮಿತಿ ಮತ್ತು ಆಡಳಿತ ಮಂಡಳಿಯ ನಿರ್ದೇಶಕರ ಪರಿಶೀಲನೆಗೆ ಒಳಗಾಗಬೇಕಿದೆ ಎಂದು ಬ್ಯಾಂಕ್‌ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.