ADVERTISEMENT

ಬಂಧನ್‌ ಬ್ಯಾಂಕ್‌ ಲಾಭ ₹ 920 ಕೋಟಿ

ಪಿಟಿಐ
Published 2 ನವೆಂಬರ್ 2020, 16:02 IST
Last Updated 2 ನವೆಂಬರ್ 2020, 16:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಬಂಧನ್‌ ಬ್ಯಾಂಕ್‌ನ ನಿವ್ವಳ ಲಾಭವು ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಶೇಕಡ 5ರಷ್ಟು ಇಳಿಕೆ ಆಗಿದ್ದು, ₹ 920 ಕೋಟಿಗೆ ತಲುಪಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹ 972 ಕೋಟಿ ನಿವ್ವಳ ಲಾಭ ಗಳಿಸಿತ್ತು. ಬ್ಯಾಂಕ್‌ನ ಒಟ್ಟಾರೆ ವರಮಾನ ₹ 1,889 ಕೋಟಿಗಳಿಂದ ₹ 2,304 ಕೋಟಿಗಳಿಗೆ ವೃದ್ಧಿಯಾಗಿದೆ.

ನಿವ್ವಳ ಬಡ್ಡಿ ವರಮಾನ ಶೇ 25.8ರಷ್ಟು ಹೆಚ್ಚಾಗಿದ್ದು ₹ 1,923 ಕೋಟಿಗಳಿಗೆ ತಲುಪಿದೆ. ಬಡ್ಡಿಯೇತರ ವರಮಾನ ಶೇ 6.1ರಷ್ಟು ಹೆಚ್ಚಾಗಿದ್ದು ₹ 382 ಕೋಟಿಗಳಷ್ಟಾಗಿದೆ. ತೆರಿಗೆ ಪಾವತಿಗೂ ಮುಂಚಿನ ಲಾಭ ₹ 1,233 ಕೋಟಿ ಆಗಿದ್ದು, ಇದು ತ್ರೈಮಾಸಿಕವೊಂದರ ಗರಿಷ್ಠ ಮಟ್ಟದ್ದಾಗಿದೆ ಎಂದು ಹೇಳಿದೆ.

ಬ್ಯಾಂಕ್‌ನ ವಸೂಲಾಗದ ಸರಾಸರಿ ಸಾಲ (ಎನ್‌ಪಿಎ) ₹ 1,064 ಕೋಟಿಗಳಿಂದ ₹ 874 ಕೋಟಿಗಳಿಗೆ ಇಳಿಕೆಯಾಗಿದೆ. ನಿವ್ವಳ ಎನ್‌ಪಿಎ ₹ 337 ಕೋಟಿಗಳಿಂದ ₹ 262 ಕೋಟಿಗಳಿಗೆ ಇಳಿಕೆ ಕಂಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.