ಬೆಂಗಳೂರು: ಕೆನರಾ ಬ್ಯಾಂಕ್‌ನಲ್ಲಿ ಸಿಂಡಿಕೇಟ್ ಬ್ಯಾಂಕ್ ವಿಲೀನಗೊಳ್ಳುವ ಪ್ರಕ್ರಿಯೆ ಬುಧವಾರದಿಂದ (ಏ. 1) ಜಾರಿಗೆ ಬರಲಿದೆ.
ಸಿಂಡಿಕೇಟ್ ಬ್ಯಾಂಕ್‌ನ ಎಲ್ಲ ಶಾಖೆಗಳು ಇನ್ನು ಮುಂದೆ ಕೆನರಾ ಬ್ಯಾಂಕ್‌ನ ಶಾಖೆಗಳಾಗಿ ಕಾರ್ಯನಿರ್ವಹಿಸಲಿವೆ.
‘ವಿಲೀನದ ನಂತರ ಎರಡೂ ಬ್ಯಾಂಕ್‌ಗಳ ಒಟ್ಟು ಶಾಖೆಗಳ ಸಂಖ್ಯೆ 10,391, ಎಟಿಎಂಗಳ ಸಂಖ್ಯೆ 12,829 ಮತ್ತು ಉದ್ಯೋಗಿಗಳ ಸಂಖ್ಯೆ 91,685ಕ್ಕೆ ಏರಲಿದೆ. ಬ್ಯಾಂಕಿಂಗ್ ಸೇವೆಯನ್ನು ವ್ಯಾಪಕವಾಗಿ ವಿಸ್ತರಿಸಲು ಹಾಗೂ ಹಣಕಾಸು ಸೇರ್ಪಡೆ ತೀವ್ರಗೊಳಿಸಲು ವಿಲೀನ ನೆರವಾಗಲಿದೆ’ ಎಂದು ಕೆನರಾ ಬ್ಯಾಂಕ್‌ನ ಸಿಇಒ ಎಲ್. ವಿ. ಪ್ರಭಾಕರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.