ADVERTISEMENT

ಬ್ಯಾಂಕ್‌ ಆಫ್‌ ಮಹಾರಾಷ್ಟ್ರಗೆ ₹1,293 ಕೋಟಿ ಲಾಭ

ಪಿಟಿಐ
Published 15 ಜುಲೈ 2024, 14:36 IST
Last Updated 15 ಜುಲೈ 2024, 14:36 IST
<div class="paragraphs"><p>ಹಣ </p></div>

ಹಣ

   

ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಆಫ್‌ ಮಹಾರಾಷ್ಟ್ರ (ಬಿಒಎಂ) 2024–25ರ ಏಪ್ರಿಲ್‌–ಜೂನ್‌ ತ್ರೈಮಾಸಿಕದಲ್ಲಿ ₹1,293 ಕೋಟಿ ನಿವ್ವಳ ಲಾಭ ಗಳಿಸಿದೆ.

ಹಿಂದಿನ ವರ್ಷದ ಇದೇ ಅವಧಿಯಲ್ಲಿ ₹882 ಕೋಟಿ ಲಾಭ ದಾಖಲಿಸಿತ್ತು. ಈ ಲಾಭಕ್ಕೆ ಹೋಲಿಸಿದರೆ ಶೇ 47ರಷ್ಟು ಹೆಚ್ಚಳವಾಗಿದೆ. ವಸೂಲಾಗದ ಸಾಲದ ಪ್ರಮಾಣದ ಇಳಿಕೆ ಮತ್ತು ಬಡ್ಡಿ ವರಮಾನದಲ್ಲಿನ ಹೆಚ್ಚಳದಿಂದ ಲಾಭದಲ್ಲಿ ಏರಿಕೆಯಾಗಿದೆ ಎಂದು ಬ್ಯಾಂಕ್‌, ಷೇರುಪೇಟೆಗೆ ಸೋಮವಾರ ತಿಳಿಸಿದೆ.

ADVERTISEMENT

ಒಟ್ಟು ವರಮಾನವು ₹5,417 ಕೋಟಿಯಿಂದ ₹6,769 ಕೋಟಿಗೆ ಹೆಚ್ಚಳವಾಗಿದೆ. ಬಡ್ಡಿ ವರಮಾನದ ಗಳಿಕೆಯು ₹4,789 ಕೋಟಿಯಿಂದ ₹5,875 ಕೋಟಿಗೆ ಏರಿಕೆಯಾಗಿದೆ.

ವಸೂಲಾಗದ ಸಾಲದ ಪ್ರಮಾಣ (ಎನ್‌ಪಿಎ) ಶೇ 2.28 ರಿಂದ ಶೇ 1.85ಕ್ಕೆ ಇಳಿದಿದೆ. ನಿವ್ವಳ ಎನ್‌ಪಿಎ ಶೇ 0.24ರಿಂದ ಶೇ 0.20ಕ್ಕೆ ತಗ್ಗಿದೆ. ಬಂಡವಾಳ ಅಪಾಯ ಅನುಪಾತವು ಶೇ 18.07ರಿಂದ ಶೇ 17.04ಕ್ಕೆ ಇಳಿಕೆಯಾಗಿದೆ ಎಂದು ತಿಳಿಸಿದೆ ಎಂದು ಬ್ಯಾಂಕ್‌ ತಿಳಿಸಿದೆ.

ಷೇರಿನ ಮೌಲ್ಯ ಏರಿಕೆ:

ಜೂನ್‌ ತ್ರೈಮಾಸಿಕದಲ್ಲಿ ಹೆಚ್ಚಿನ ಲಾಭ ಗಳಿಸಿದ್ದರಿಂದ ಬ್ಯಾಂಕ್‌ನ ಷೇರಿನ ಮೌಲ್ಯ ಶೇ 6ರ ವರೆಗೆ ಏರಿಕೆಯಾಗಿದೆ. ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ಷೇರಿನ ಬೆಲೆ ಕ್ರಮವಾಗಿ ₹68.75 ಮತ್ತು ₹68.70ಕ್ಕೆ ಮುಟ್ಟಿದೆ.

ಷೇರಿನ ಮೌಲ್ಯ ಏರಿಕೆಯಿಂದ ಬ್ಯಾಂಕ್‌ನ ಮಾರುಕಟ್ಟೆ ಮೌಲ್ಯಕ್ಕೆ (ಎಂ–ಕ್ಯಾಪ್‌) ₹2,613 ಕೋಟಿ ಸೇರ್ಪಡೆಯಾಗಿದೆ. ಬ್ಯಾಂಕ್‌ನ ಒಟ್ಟು ಎಂ–ಕ್ಯಾಪ್‌ ₹48,684 ಕೋಟಿಗೆ ಏರಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.