ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಮಹಾರಾಷ್ಟ್ರ (ಬಿಒಎಂ) ಸೋಮವಾರದಿಂದ ಜಾರಿಗೆ ಬರುವಂತೆ ಗೃಹ ಮತ್ತು ಕಾರು ಸಾಲಗಳ ಮೇಲಿನ ಬಡ್ಡಿದರವನ್ನು ಶೇ 0.20ರವರೆಗೆ ಇಳಿಕೆ ಮಾಡಿದೆ. ಪ್ರೊಸೆಸಿಂಗ್ ಶುಲ್ಕವನ್ನೂ ಕೈಬಿಟ್ಟಿರುವುದಾಗಿ ಅದು ತಿಳಿಸಿದೆ.
ಈ ಪರಿಷ್ಕರಣೆಯಿಂದಾಗಿ ಗೃಹ ಸಾಲದ ನೀಡಿಕೆ ದರವು ಶೇ 8.60ರಿಂದ ಶೇ 8.50ಕ್ಕೆ ಇಳಿಕೆ ಆಗಲಿದೆ. ಕಾರು ಸಾಲದ ಬಡ್ಡಿದರವು ಶೇ 0.20ರಷ್ಟು ಇಳಿಕೆ ಆಗಲಿದ್ದು, ಶೇ 8.70ಕ್ಕೆ ತಲುಪಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಬಡ್ಡಿದರ ಕಡಿತ ಮತ್ತು ಪ್ರೊಸೆಸಿಂಗ್ ಶುಲ್ಕ ಕೈಬಿಟ್ಟಿರುವುದರಿಂದ ಗ್ರಾಹಕರ ಮೇಲಿನ ಆರ್ಥಿಕ ಹೊರೆ ಒಂದಿಷ್ಟು ಕಡಿಮೆ ಆಗಲಿದೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.