ADVERTISEMENT

ಕಾರ್ಪೊರೇಟ್‌ ಕಂಪನಿಗಳಿಂದ ಬ್ಯಾಂಕ್: ಬಸು ವಿರೋಧ

ಪಿಟಿಐ
Published 26 ನವೆಂಬರ್ 2020, 21:04 IST
Last Updated 26 ನವೆಂಬರ್ 2020, 21:04 IST

ನವದೆಹಲಿ: ಕಾರ್ಪೊರೇಟ್ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅವಕಾಶ ಕೊಡಬಹುದು ಎಂದು ಆರ್‌ಬಿಐನ ಆಂತರಿಕ ಸಮಿತಿ ಮಾಡಿ ರುವ ಪ್ರಸ್ತಾವನೆಯು ‘ಒಳ್ಳೆಯದಾಗಿ ಕಾಣುತ್ತಿರುವ’, ಆದರೆ ‘ತಪ್ಪು ದಾರಿ ಯಲ್ಲಿ’ ಕರೆದೊಯ್ಯುವ ಕ್ರಮ ಎಂದು ವಿಶ್ವ ಬ್ಯಾಂಕ್‌ನ ಮಾಜಿ ಮುಖ್ಯ ಅರ್ಥಶಾಸ್ತ್ರಜ್ಞ ಕೌಶಿಕ್ ಬಸು ಹೇಳಿದ್ದಾರೆ. ಈ ಕ್ರಮದಿಂದಾಗಿ ಮುಂದೆ ಹಣಕಾಸಿನ ಅಸ್ಥಿರತೆ ಮೂಡಬಹುದು ಎಂದು ಅವರು ಎಚ್ಚರಿಸಿದ್ದಾರೆ.

ಯಶಸ್ವಿ ಅರ್ಥ ವ್ಯವಸ್ಥೆಗಳಲ್ಲಿ ಉದ್ಯಮಗಳು ಮತ್ತು ಕಾರ್ಪೊರೇಟ್‌ ಕಂಪನಿಗಳು ಹಾಗೂ ಬ್ಯಾಂಕ್‌ಗಳ ನಡುವೆ ಸ್ಪಷ್ಟ ಗಡಿಗಳು ಇರುತ್ತವೆ. ಇದಕ್ಕೆ ಕಾರಣಗಳು ಇವೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT