ನವದೆಹಲಿ : 2023–24ನೇ ಹಣಕಾಸು ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಇಂಡಿಯಾವು ₹1,870 ಕೋಟಿ ನಿವ್ವಳ ಲಾಭ ಗಳಿಸಿದೆ.
2022–23ರ ಮೂರನೇ ತ್ರೈಮಾಸಿಕದಲ್ಲಿ ₹1,151 ಕೋಟಿ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಮೂರನೇ ತ್ರೈಮಾಸಿದಲ್ಲಿನ ಲಾಭದಲ್ಲಿ ಶೇ 62ರಷ್ಟು ಏರಿಕೆ ಆಗಿದೆ ಎಂದು ಬ್ಯಾಂಕ್ ಶುಕ್ರವಾರ ಷೇರುಪೇಟೆಗೆ ತಿಳಿಸಿದೆ.
ಬಡ್ಡಿ ವರಮಾನವು ₹12,728 ಕೋಟಿಯಿಂದ ₹15,218 ಕೋಟಿಗೆ ಹೆಚ್ಚಳವಾಗಿದೆ. ವಸೂಲಾಗದ ಸಾಲದ ಸರಾಸರಿ ಪ್ರಮಾಣವು (ಎನ್‌ಪಿಎ) ಶೇ 7.66ರಿಂದ ಶೇ 5.35ಕ್ಕೆ ಇಳಿಕೆಯಾಗಿದೆ. ನಿವ್ವಳ ಎನ್‌ಪಿಎ ಶೇ 1.61ರಿಂದ ಶೇ 1.14ಕ್ಕೆ ಕುಗ್ಗಿದೆ ಎಂದು ಬ್ಯಾಂಕ್ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.