ADVERTISEMENT

ಗುರಿ ತಲುಪದ ‘ಮುದ್ರಾ’

ಪಿಟಿಐ
Published 3 ಮಾರ್ಚ್ 2019, 18:30 IST
Last Updated 3 ಮಾರ್ಚ್ 2019, 18:30 IST
   

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ‘ಮುದ್ರಾ’ ಸಾಲ ನೀಡಿಕೆಯಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಗುರಿ ತಲುಪುವುದು ಕಷ್ಟವಾಗಲಿದೆ.

ಹಣಕಾಸು ವರ್ಷ ಮುಕ್ತಾಯವಾಗಲು ಒಂದೇ ತಿಂಗಳು ಬಾಕಿ ಇದೆ. ಹೀಗಾಗಿ, ಸರ್ಕಾರ ನೀಡಿರುವ ಗುರಿಯ ಪ್ರಕಾರ ₹ 3 ಲಕ್ಷ ಕೋಟಿ ಸಾಲ ನೀಡಬೇಕಾಗಿದೆ. ಆದರೆ, ಬ್ಯಾಂಕ್‌ಗಳು ವಿತರಿಸಿರುವುದು ₹ 2 ಲಕ್ಷ ಕೋಟಿ ಮಾತ್ರ ಎಂದು ಸರ್ಕಾರ ಮಾಹಿತಿ ನೀಡಿದೆ.

ಪ್ರಸಕ್ತ ಹಣಕಾಸು ವರ್ಷಕ್ಕೆ 3.89 ಕೋಟಿಗೂ ಹೆಚ್ಚು ‘ಮುದ್ರಾ’ ಸಾಲಗಳನ್ನು ಮಂಜೂರು ಮಾಡಿರುವುದಾಗಿ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.