ADVERTISEMENT

₹ 10.57 ಲಕ್ಷ ಕೋಟಿ ಸಾಲ ರೈಟ್‌ ಆಫ್‌

ಪಿಟಿಐ
Published 5 ಡಿಸೆಂಬರ್ 2023, 16:00 IST
Last Updated 5 ಡಿಸೆಂಬರ್ 2023, 16:00 IST
   

ನವದೆಹಲಿ: ಕಳೆದ ಐದು ಹಣಕಾಸು ವರ್ಷಗಳಲ್ಲಿ (2018–19 ರಿಂದ 2022–23) ಬ್ಯಾಂಕ್‌ಗಳು ₹10.57 ಲಕ್ಷ ಕೋಟಿ ಮೊತ್ತದ ಸಾಲವನ್ನು ರೈಟ್‌ ಆಫ್‌ ಮಾಡಿವೆ ಎಂದು ಕೇಂದ್ರ ಸರ್ಕಾರವು ಮಂಗಳವಾರ ಸಂಸತ್ತಿಗೆ ಹೇಳಿದೆ.

ಆರ್‌ಬಿಐ ನೀಡಿರುವ ಮಾಹಿತಿಯ ಪ್ರಕಾರ, ಶೆಡ್ಯೂಲ್ಡ್‌ ವಾಣಿಜ್ಯ ಬ್ಯಾಂಕ್‌ಗಳು ಕಳೆದ ಐದು ಹಣಕಾಸು ವರ್ಷಗಳಲ್ಲಿ ₹10.57 ಲಕ್ಷ ಕೋಟಿ ಸಾಲವನ್ನು ರೈಟ್‌ ಆಫ್‌ ಮಾಡಿವೆ. ಇದೇ ಅವಧಿಯಲ್ಲಿ ವಸೂಲಾಗದ ಒಟ್ಟು ಸಾಲದಲ್ಲಿ (ಎನ್‌ಪಿಎ) ₹7.15 ಲಕ್ಷ ಕೋಟಿಯನ್ನು ವಸೂಲಿ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕರಾಡ್ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT