ADVERTISEMENT

ಬಾಸ್ಮತಿ ಅಕ್ಕಿ ರಫ್ತು ಹೆಚ್ಚಳ

ಪಿಟಿಐ
Published 6 ಆಗಸ್ಟ್ 2022, 12:38 IST
Last Updated 6 ಆಗಸ್ಟ್ 2022, 12:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಬಾಸ್ಮತಿ ಅಕ್ಕಿ ರಫ್ತು 2022-23ರ ಏಪ್ರಿಲ್‌–ಜೂನ್‌ ಅವಧಿಯಲ್ಲಿ ಶೇ 25.54ರಷ್ಟು ಹೆಚ್ಚಾಗಿದ್ದು, ಮೌಲ್ಯದ ಲೆಕ್ಕದಲ್ಲಿ ₹9,112 ಕೋಟಿಗೆ ತಲುಪಿದೆ ಎಂದು ವಾಣಿಜ್ಯ ಸಚಿವಾಲಯ ಶನಿವಾರ ತಿಳಿಸಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹7,302 ಕೋಟಿ ಮೌಲ್ಯದ ಬಾಸ್ಮತಿ ಅಕ್ಕಿ ರಫ್ತಾಗಿತ್ತು.

ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಶೇ 31ರಷ್ಟು ಹೆಚ್ಚಾಗಿದ್ದು ₹58,637 ಕೋಟಿಗೆ ತಲುಪಿದೆ. ಮಾಂಸ, ಡೈರಿ ಉತ್ಪನ್ನ ಮತ್ತು ಕೋಳಿ ಉತ್ಪನ್ನಗಳ ರಫ್ತು ಶೇ 9.5ರಷ್ಟು ಹೆಚ್ಚಾಗಿದೆ.

ADVERTISEMENT

2022–23ನೇ ಹಣಕಾಸು ವರ್ಷಕ್ಕೆ ₹ 1.86 ಲಕ್ಷ ಕೋಟಿ ಮೌಲ್ಯದ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನಗಳನ್ನು ರಫ್ತು ಮಾಡುವ ಗುರಿಯನ್ನು ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರವು (ಎಪಿಇಡಿಎ) ನಿಗದಿಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.