ADVERTISEMENT

ಕರ್ನಾಟಕದಲ್ಲಿ ₹8,000 ಕೋಟಿಯ ಬ್ಯಾಟರಿ ಉತ್ಪಾದನಾ ಘಟಕ ಸ್ಥಾಪಿಸಲಿರುವ ಐಬಿಸಿ

ರಾಯಿಟರ್ಸ್
Published 2 ಆಗಸ್ಟ್ 2023, 4:45 IST
Last Updated 2 ಆಗಸ್ಟ್ 2023, 4:45 IST
   

ಬೆಂಗಳೂರು: ಕರ್ನಾಟಕದಲ್ಲಿ ₹8,000 ಕೋಟಿ ಮೊತ್ತದ ಬ್ಯಾಟರಿ ಉತ್ಪಾದಕ ಘಟಕ ಸ್ಥಾಪಿಸಲು ಖ್ಯಾತ ಬ್ಯಾಟರಿ ತಯಾಕರ ಕಂಪನಿ ಇಂಟರ್‌ನ್ಯಾಷನಲ್ ಬ್ಯಾಟರಿ ಕಂಪನಿ (ಐಬಿಸಿ) ಕರ್ನಾಟಕ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ತಿಳಿಸಿದ್ದಾರೆ.

ಈ ಉತ್ಪಾದನಾ ಘಟಕ ಸುಮಾರು 100 ಎಕರೆ ಪ್ರದೇಶದಲ್ಲಿ ತಲೆ ಎತ್ತಲಿದೆ ಎಂದು ಅವರು ಮೈಕ್ರೋಬ್ಲಾಗಿಂಗ್‌ ತಾಣ ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.

ಈ ಘಟಕದಲ್ಲಿ ಲೀಥಿಯಂ–ಅಯಾನ್‌ ಬ್ಯಾಟರಿಗಳನ್ನು ಉತ್ಪಾದಿಸಲಿದೆ. 2025ರ ವೇಳೆ ಉತ್ಪಾದನೆ ಪ್ರಾರಂಭವಾಗಲಿದೆ. 2028ರ ವೇಳೆಗೆ 10 ಗಿಗಾ ವ್ಯಾಟ್ ಸಾಮರ್ಥ್ಯದಷ್ಟು ಬ್ಯಾಟರಿ ಉತ್ಪಾದನೆಯ ಗುರಿ ಇಟ್ಟುಕೊಂಡಿದೆ ಎಂದು ಕರ್ನಾಟಕ ಕೈಗಾರಿಕೆ ಹಾಗೂ ವಾಣಿಜ್ಯ ಆಯುಕ್ತ ಗುಂಜನ್‌ ಕೃಷ್ಣ ಅವರನ್ನು ಉಲ್ಲೇಖಿಸಿ ವರದಿ ಮಾಡಿದೆ.

ADVERTISEMENT

ಜೂನ್‌ ತಿಂಗಳಿನಲ್ಲಿ ಕಂಪನಿಯ ಪ್ರಮುಖರು ತಮ್ಮನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು ಎಂದು ಎಂ.ಬಿ ಪಾಟೀಲ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.