ಬೆಂಗಳೂರು: ಭಾರತ ಮತ್ತು ಜಪಾನಿನ ಉದ್ದಿಮೆಗಳು ಜಾಗತಿಕ ಮಟ್ಟದಲ್ಲಿ ವಹಿವಾಟು ವಿಸ್ತರಿಸಲು, ವ್ಯಾಪಾರದ ಮಾಹಿತಿ ಹಂಚಿಕೊಳ್ಳಲು ಅನುಕೂಲ ಆಗುವಂತೆ ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರಿ ಆ್ಯಂಡ್ ಕಾಮರ್ಸ್ (ಬಿಸಿಐಸಿ) ಮತ್ತು ಜಪಾನ್‌ನ ಸ್ಮಾಲ್ ಆ್ಯಂಡ್ ಮೀಡಿಯಂ ಎಂಟರ್‌ಪ್ರೈಸಸ್ ಆ್ಯಂಡ್ ರೀಜನಲ್ ಇನೊವೇಷನ್ (ಎಸ್‌ಎಂಆರ್‌ಜೆ) ಒಪ್ಪಂದ ಮಾಡಿಕೊಂಡಿವೆ.
ಬಿಸಿಐಸಿನ ಅಧ್ಯಕ್ಷ ಎಸ್. ದೇವರಾಜನ್ ಮತ್ತು ಎಸ್‌ಎಂಆರ್‌ಜೆನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಟಿ.ಕನೆಕೊ ಅವರು ಒಪ್ಪಂದಕ್ಕೆ ಸಹಿ ಮಾಡಿದ್ದಾರೆ.
ಭಾರತದ ಜಿಡಿಪಿಗೆ ತಯಾರಿಕಾ ವಲಯದ ಕೊಡುಗೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಒಪ್ಪಂದವು ನೆರವಾಗುವ ನಿರೀಕ್ಷೆ ಇದೆ. ಆಧುನಿಕ ತಂತ್ರಜ್ಞಾನಗಳನ್ನು ತ್ವರಿತವಾಗಿ ಅಳವಡಿಸಿಕೊಳ್ಳಲು ಹಾಗೂ ಮಧ್ಯಪ್ರಾಚ್ಯ, ಯುರೋಪ್ ಮತ್ತು ಆಫ್ರಿಕಾಕ್ಕೆ ವಹಿವಾಟು ವಿಸ್ತರಣೆ ಮಾಡಲು ಎರಡೂ ದೇಶಗಳ ಕಂಪನಿಗಳಿಗೆ ಈ ಒಪ್ಪಂದದಿಂದ ಅನುಕೂಲ ಆಗಲಿದೆ ಎಂದು ಬಿಸಿಐಸಿ ಅಧ್ಯಕ್ಷ ದೇವರಾಜನ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.