ಬೆಂಗಳೂರು: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ನ (ಬಿಇಎಲ್) ವ್ಯವಸ್ಥಾಪಕ ನಿರ್ದೇಶಕ ದಿನೇಶ್ ಕುಮಾರ್ ಬಾತ್ರಾ ಅವರಿಗೆ ‘ಇನ್ನೊವೇಟಿವ್ ಸಿಎಫ್ಒ’ ಪ್ರಶಸ್ತಿ ದೊರೆತಿದೆ. ಬಾತ್ರಾ ಅವರು ಕಂಪನಿಯ ಮುಖ್ಯ ಹಣಕಾಸು ಅಧಿಕಾರಿಯೂ (ಸಿಎಫ್ಒ) ಹೌದು.
ಮುಂಬೈನಲ್ಲಿ ಬ್ಯುಸಿನೆಸ್ ಲೀಡರ್ಶಿಪ್ ಅವಾರ್ಡ್ಸ್ನ ಎರಡನೆಯ ಆವೃತ್ತಿಯಲ್ಲಿ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.
ಬಾತ್ರಾ ಅವರು ಸಿಎಫ್ಒ ಆಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯವು ₹ 24 ಸಾವಿರ ಕೋಟಿ ಆಗಿತ್ತು. ಅವರ ನಾಯಕತ್ವದಲ್ಲಿ ಮಾರುಕಟ್ಟೆ ಬಂಡವಾಳ ಮೌಲ್ಯವು ₹ 80 ಸಾವಿರ ಕೋಟಿಯ ಗಡಿ ದಾಟಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.