ADVERTISEMENT

ಬಿಇಎಂಎಲ್‌ ಲಾಭ ಶೇ 52ರಷ್ಟು ಹೆಚ್ಚಳ

ಪಿಟಿಐ
Published 9 ನವೆಂಬರ್ 2022, 12:57 IST
Last Updated 9 ನವೆಂಬರ್ 2022, 12:57 IST

ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿಇಎಂಎಲ್‌, ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ₹ 16.26 ಕೋಟಿ ಲಾಭ ಗಳಿಸಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಕಂಪನಿ ₹ 10.66 ಕೋಟಿ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಲಾಭವು ಶೇ 52.5ರಷ್ಟು ಹೆಚ್ಚಾಗಿದೆ ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.

ಕಂಪನಿಯ ಒಟ್ಟು ವರಮಾನವು ₹ 1,013 ಕೋಟಿಯಿಂದ ₹ 806 ಕೋಟಿಗೆ ಇಳಿಕೆ ಆಗಿದೆ. ವೆಚ್ಚವು ₹ 1,002 ಕೋಟಿಯಿಂದ ₹ 789 ಕೋಟಿಗೆ ಇಳಿಕೆ ಕಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT