ಬೆಂಗಳೂರು: ಬೆಂಗಳೂರಿನ ಸ್ಟ್ಯಾನ್ಲಿ ಲೈಫ್‌ಸ್ಟೈಲ್ಸ್ ಲಿಮಿಟೆಡ್ ಕಂಪನಿಯು ಐಪಿಒ ಮೂಲಕ ಬಂಡವಾಳ ಸಂಗ್ರಹಿಸಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಒಪ್ಪಿಗೆ ಪಡೆದುಕೊಂಡಿದೆ.
ಐಪಿಒಗಾಗಿ ಕಂಪನಿಯು ಸೆಪ್ಟೆಂಬರ್ 4ರಂದು ಸೆಬಿಗೆ ಕರಡು ದಾಖಲೆ ಪತ್ರಗಳನ್ನು ಸಲ್ಲಿಸಿತ್ತು. ಅದರಲ್ಲಿ ಇರುವಂತೆ ₹200 ಕೋಟಿ ಮೌಲ್ಯದ ಹೊಸ ಷೇರುಗಳು ಮತ್ತು ಆಫರ್ ಫರ್ ಸೇಲ್ ಮೂಲಕ (ಒಎಫ್‌ಎಸ್) 91.33 ಲಕ್ಷ ಈಕ್ವಿಟಿ ಷೇರುಗಳನ್ನು ಮಾರಾಟ ಮಾಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.