ADVERTISEMENT

₹80 ಸಾವಿರ ದಾಟಿದ ಚಿನ್ನದ ಧಾರಣೆ

ಪಿಟಿಐ
Published 17 ಅಕ್ಟೋಬರ್ 2024, 0:04 IST
Last Updated 17 ಅಕ್ಟೋಬರ್ 2024, 0:04 IST
   

ನವದೆಹಲಿ/ಬೆಂಗಳೂರು: ದೇಶೀಯ ಆಭರಣ ತಯಾರಕರಿಂದ ಖರೀದಿ ಹೆಚ್ಚಾಗಿದ್ದರಿಂದ ಚಿನ್ನ ಮತ್ತು ಬೆಳ್ಳಿ ಧಾರಣೆಯು ಬುಧವಾರದ ವಹಿವಾಟಿನಲ್ಲಿ ಏರಿಕೆಯಾಗಿದೆ.

ಚಿನ್ನದ ದರವು 10 ಗ್ರಾಂಗೆ ₹250 ಹೆಚ್ಚಳವಾಗಿ ₹78,900ರಂತೆ ಮಾರಾಟವಾಗಿದೆ. ಬೆಳ್ಳಿ ಧಾರಣೆಯು ಕೆ.ಜಿಗೆ ₹1 ಸಾವಿರ ಏರಿಕೆಯಾಗಿ ₹93,500ಕ್ಕೆ ಮುಟ್ಟಿದೆ ಎಂದು ಅಖಿಲ ಭಾರತ ಸರಾಫ್‌ ಅಸೋಸಿಯೇಷನ್‌ ತಿಳಿಸಿದೆ.

ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ದರವು ₹80,230 ಮತ್ತು ಬೆಳ್ಳಿ ಧಾರಣೆ ಕೆ.ಜಿಗೆ ₹96,600ರಂತೆ ಮಾರಾಟವಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.