ADVERTISEMENT

Bengaluru | ರಿಟೇಲ್‌ ಶೃಂಗಸಭೆ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 16:11 IST
Last Updated 24 ಜುಲೈ 2024, 16:11 IST
ರಿಟೇಲರ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾದ (ಆರ್‌ಎಐ) ಎರಡನೇ ಆವೃತ್ತಿಯ ರಿಟೇಲ್‌ ಶೃಂಗಸಭೆಯು ಬೆಂಗಳೂರಿನಲ್ಲಿ ನಡೆಯಿತು
ರಿಟೇಲರ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾದ (ಆರ್‌ಎಐ) ಎರಡನೇ ಆವೃತ್ತಿಯ ರಿಟೇಲ್‌ ಶೃಂಗಸಭೆಯು ಬೆಂಗಳೂರಿನಲ್ಲಿ ನಡೆಯಿತು   

ಬೆಂಗಳೂರು: ರಿಟೇಲರ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾದ (ಆರ್‌ಎಐ) ಎರಡನೇ ಆವೃತ್ತಿಯ ಬೆಂಗಳೂರು ರಿಟೇಲ್‌ ಶೃಂಗಸಭೆಯು ನಗರದಲ್ಲಿ ಇತ್ತೀಚೆಗೆ ಯಶಸ್ವಿಯಾಗಿ ನಡೆಯಿತು.

ಆರ್‌ಎಐ ಸಿಇಒ ಕುಮಾರ್ ರಾಜಗೋಪಾಲನ್ ಮಾತನಾಡಿ, ‘ಭಾರತದ ರಿಟೇಲ್‌ ಕ್ಷೇತ್ರವು ಪರಿವರ್ತನೆಯ ಹಾದಿಯಲ್ಲಿದೆ. ಮಾರುಕಟ್ಟೆಯನ್ನು ಸದುಪಯೋಗ ಪಡಿಸಿಕೊಳ್ಳಲು ನಾವೀನ್ಯತೆಗೆ ಗಮನ ನೀಡಬೇಕಿದೆ. ಜೊತೆಗೆ, ಡಿಜಿಟಲ್ ಮೂಲ ಸೌಕರ್ಯದ ವಿಸ್ತರಣೆಗೆ ಒತ್ತು ನೀಡಬೇಕಿದೆ’ ಎಂದು ಹೇಳಿದರು.

‘ತಂತ್ರಜ್ಞಾನ ಬಳಸುವುದರಲ್ಲಿ ರಿಟೇಲ್‌  ವ್ಯಾಪಾರದ ಭವಿಷ್ಯ ಅಡಗಿದೆ. ಇದರಿಂದ ಗ್ರಾಹಕರ ಆದ್ಯತೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ’ ಎಂದು ಬ್ರಿಟಾನಿಯಾ ಇಂಡಸ್ಟ್ರೀಸ್ ಲಿಮಿಟೆಡ್‌ನ ಸಿಇಒ ಮತ್ತು ಕಾರ್ಯ ನಿರ್ವಾಹಕ ನಿರ್ದೇಶಕ ರಜನೀತ್ ಕೊಹ್ಲಿ ಅಭಿಪ್ರಾಯಪಟ್ಟರು. 

ADVERTISEMENT

ಬಿಗ್‌ಬಾಸ್ಕೆಟ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ಹರಿ ಮೆನನ್, ರಿಟೇಲ್‌ ಉದ್ಯಮವು ಡಿಜಿಟಲ್ ರೂಪಾಂತರದ ನಿರ್ಣಾಯಕವಾಗಿದೆ. ಆನ್‌ಲೈನ್ ಮತ್ತು ಆಫ್‌ಲೈನ್‌ಗಳನ್ನು ಸಂಯೋಜಿಸಲು, ಹೆಚ್ಚುತ್ತಿರುವ ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ಅತ್ಯಗತ್ಯವಾಗಿದೆ ಎಂದು ಹೇಳಿದರು.

‘ಗ್ರಾಹಕರ ಅಗತ್ಯಗಳನ್ನು ಅರ್ಥೈಸಿಕೊಳ್ಳುವುದು ಮತ್ತು ಪ್ರತಿಕ್ರಿಯಿಸುವುದು ಇಂದು ಹೆಚ್ಚು ಮುಖ್ಯವಾಗಿದೆ. ನಿರಂತರ ಬೆಳವಣಿಗೆ ಮತ್ತು ಸ್ಪರ್ಧಾತ್ಮಕತೆಯನ್ನು ಈ ವಲಯವು ಸೃಷ್ಟಿಸಿದೆ’ ಎಂದು ಲ್ಯಾಂಡ್‌ ಮಾರ್ಕ್‌ ಸಮೂಹದ ಈಸಿಬೈ ಸಿಇಒ ಕರಣ್‌ ಮೆಹ್ತಾ ಹೇಳಿದರು.

ವಿವಿಧ ಕಂಪನಿಗಳ ಪ್ರಮುಖರು ಶೃಂಗಸಭೆಯಲ್ಲಿ ಹಾಜರಾಗಿ ಅಭಿಪ್ರಾಯ ಹಂಚಿಕೊಂಡರು.

ರಿಟೇಲರ್ಸ್‌ ಅಸೋಷಿಯೇಷನ್‌ ಆಫ್‌ ಇಂಡಿಯಾದ (ಆರ್‌ಎಐ) ಎರಡನೇ ಆವೃತ್ತಿಯ ಬೆಂಗಳೂರು ರಿಟೇಲ್‌ ಶೃಂಗಸಭೆ ಯಶಸ್ವಿಯಾಗಿ ನಗರದಲ್ಲಿ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.