ADVERTISEMENT

ದೇಶದಲ್ಲೇ ಗರಿಷ್ಠ ವೇತನ ನೀಡುತ್ತಿದೆ ಬೆಂಗಳೂರು 

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2019, 13:35 IST
Last Updated 20 ಡಿಸೆಂಬರ್ 2019, 13:35 IST
ಸಂಸ್ಥೆಯೊಂದರ ಉದ್ಯೋಗಿಗಳು –ಸಾಂದರ್ಭಿಕ ಚಿತ್ರ
ಸಂಸ್ಥೆಯೊಂದರ ಉದ್ಯೋಗಿಗಳು –ಸಾಂದರ್ಭಿಕ ಚಿತ್ರ   

ಬೆಂಗಳೂರು:ಮಾಹಿತಿತಂತ್ರಜ್ಞಾನ ನಗರಿ ಬೆಂಗಳೂರು ಈಗ ಉದ್ಯೋಗಿಗಳ ಸ್ವರ್ಗವೂ ಆಗುತ್ತಿದೆ.ವೃತ್ತಿನಿರತರಿಗೆ ದೇಶದಲ್ಲಿಯೇ ಅತಿ ಹೆಚ್ಚು ವೇತನ ಸಿಗುವ ಸ್ಥಳವಾಗಿ ಯುವಜನತೆಯನ್ನು ಸೆಳೆಯುತ್ತಿದೆ.

ಹೊಸದಾಗಿ ಉದ್ಯೋಗ ಪಡೆಯುವವರು ಸೇರಿದಂತೆ ಕಿರಿಯ ಮಟ್ಟದ ಉದ್ಯೋಗಿಗಳು ವಾರ್ಷಿಕ ಸರಾಸರಿ ₹ 5.27 ಲಕ್ಷ ಪಡೆಯುತ್ತಿದ್ದಾರೆ. ಇದು ಮುಂಬೈನಲ್ಲಿ ಪಡೆಯುವ ವೇತನಕ್ಕಿಂತ ಶೇ 15ರಷ್ಟು ಹೆಚ್ಚು ಎಂದು ರ‍್ಯಾಂಡ್‌ಸ್ಟಡ್‌ ಅಧ್ಯಯನದ ಮೂಲಕ ತಿಳಿದು ಬಂದಿದೆ.

ಬೆಂಗಳೂರು ಹೊರತು ಪಡಿಸಿದರೆ ಕಿರಿಯ ಮಟ್ಟದ ಉದ್ಯೋಗಿಗಳಿಗೆ ಹೈದರಾಬಾದ್‌ ₹ 5 ಲಕ್ಷ ಪ್ಯಾಕೇಜ್‌ ನೀಡುತ್ತಿದೆ.

ADVERTISEMENT

6 ರಿಂದ 15 ವರ್ಷ ಕಾರ್ಯಾನುಭವ ಹೊಂದಿರುವವರು ಹಾಗೂ ಅದಕ್ಕಿಂತಲೂ ಹೆಚ್ಚು ಅನುಭವ ಹೊಂದಿರುವ ಹಿರಿಯ ಮಟ್ಟದ ವೃತ್ತಿನಿರತರು ಬೆಂಗಳೂರಿನಲ್ಲಿ ವಾರ್ಷಿಕ ಸರಾಸರಿ ವೇತನ ಕ್ರಮವಾಗಿ ₹ 16.45 ಲಕ್ಷ ಮತ್ತು ₹ 35.45 ಲಕ್ಷ ಪಡೆಯುತ್ತಿದ್ದಾರೆ.

ಐಟಿ ವಲಯದಲ್ಲಿ ಕಿರಿಯ ಮಟ್ಟದ ಉದ್ಯೋಗಿಗಳು ₹ 4.96 ಲಕ್ಷ, ನಂತರದ ಹಂತದಲ್ಲಿ ₹ 15.09 ಲಕ್ಷ ಹಾಗೂ ಹಿರಿಯ ಮಟ್ಟದ ಉದ್ಯೋಗಿಗಳು ₹ 35.84 ಲಕ್ಷ ವಾರ್ಷಿಕ ವೇತನ ಹೊಂದಿದ್ದಾರೆ.

ದೂರ ಸಂಪರ್ಕ ವಲಯ ಆರ್ಥಿಕ ಹೊಡೆತ ಅನುಭವಿಸುತ್ತಿದ್ದರೂ ಅಲ್ಲಿನ ಉದ್ಯೋಗಿಗಳು ₹ 4.43 ಲಕ್ಷದಿಂದ ₹ 14.71 ಲಕ್ಷ ವಾರ್ಷಿಕ ವೇತನ ಪಡೆಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.